ರಶ್ಯ-ಉಕ್ರೇನ್ ನಡುವೆ ಮುಂದುವರಿದ ಸಂಘರ್ಷ : ನಾಲ್ವರು ಮೃತ್ಯು, 27 ಮಂದಿಗೆ ಗಾಯ

Photo Credit : aljazeera.com
ಕೀವ್, ಮಾ.12: ರಶ್ಯ ಮತ್ತು ಉಕ್ರೇನ್ನ ನಡುವೆ ಸಂಘರ್ಷ ಮತ್ತೆ ತೀವ್ರಗೊಂಡಿದ್ದು ಎರಡೂ ದೇಶಗಳ ನಡುವಿನ ಡ್ರೋನ್ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಪೂರ್ವ ಉಕ್ರೇನ್ನ ಖಾರ್ಕಿವ್ ನಗರದ ಶೆವ್ಚೆಂಕಿವಸ್ಕಿ ಜಿಲ್ಲೆಯಲ್ಲಿ ರಶ್ಯದ ಡ್ರೋನ್ ದಾಳಿಯಲ್ಲಿ ಇಬ್ಬರು ಹತರಾಗಿದ್ದು ಮೂವರು ಮಹಿಳೆಯರ ಸಹಿತ ಇತರ 7 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಗವರ್ನರ್ ಒಲೆಗ್ ಸಿನೆಗುಬೊವ್ ಹೇಳಿದ್ದಾರೆ.
ಆಗ್ನೇಯ ನಗರ ಖೆರ್ಸನ್ನಲ್ಲಿ ಮಿನಿ ಬಸ್ಸೊಂದರ ಮೇಲೆ ರಶ್ಯದ ನಡೆಸಿದ ಡ್ರೋನ್ ದಾಳಿಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ನ ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಝಪೊರಿಝಿಯಾದ ರಶ್ಯ ಆಕ್ರಮಿತ ಪ್ರದೇಶದ ವಾಸಿಲಿವ್ಕಾ ಪಟ್ಟಣದಲ್ಲಿ ಕಾರೊಂದರ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿರುವುದಾಗಿ ರಶ್ಯ ನೇಮಿಸಿರುವ ಗವರ್ನರ್ ಯೆವ್ಗಿನಿ ಬಲಿಟ್ಸ್ಕಿ ಹೇಳಿದ್ದಾರೆ.
Next Story





