ವಾಟ್ಸ್ಆ್ಯಪ್ ನಿಷೇಧಿಸುವ ಬಗ್ಗೆ ಪರಿಶೀಲನೆ: ರಶ್ಯ ಎಚ್ಚರಿಕೆ

Photo Credit : PTI
ಮಾಸ್ಕೋ: ಅಪರಾಧವನ್ನು ತಡೆಯಲು ವಿಫಲವಾಗಿರುವ ಜನಪ್ರಿಯ ಮೆಸೇಜಿಂಗ್ ಸೇವೆ ವಾಟ್ಸ್ಆ್ಯಪ್ ನಿಷೇಧಿಸುವ ಬಗ್ಗೆ ಪರಿಗಣಿಸುತ್ತಿರುವುದಾಗಿ ರಶ್ಯ ಶುಕ್ರವಾರ ಹೇಳಿದ್ದು, ದೇಶೀಯ ಪರ್ಯಾಯ ಸಾಮಾಜಿಕ ಮಾಧ್ಯಮ ವ್ಯವಸ್ಥೆಗೆ ಬದಲಾಯಿಸುವಂತೆ ಕೋಟ್ಯಾಂತರ ಬಳಕೆದಾರರನ್ನು ಆಗ್ರಹಿಸಿದೆ.
`ರಶ್ಯದ ಕಾನೂನು, ಶಾಸನಗಳನ್ನು ಅನುಸರಿಸಲು ವಿಫಲವಾದರೆ ವಾಟ್ಸ್ಆ್ಯಪ್ ಮೇಲೆ ಸಂಪೂರ್ಣ ನಿಷೇಧ ಹೇರಬಹುದು. ಆದ್ದರಿಂದ ರಶ್ಯನ್ನರು ರಾಷ್ಟ್ರೀಯ ಸೇವೆಗೆ ಬದಲಾಯಿಸಬೇಕು ಎಂದು ರಶ್ಯದ ಅಧಿಕಾರಿಗಳು ಆಗ್ರಹಿಸಿದ್ದಾರೆ.
`ಸುರಕ್ಷಿತ ಸಂವಹನಕ್ಕಾಗಿ ಜನರ ಹಕ್ಕನ್ನು ಉಲ್ಲಂಘಿಸುವ ಸರಕಾರದ ಪ್ರಯತ್ನವನ್ನು ತಾನು ನಿರಾಕರಿಸಿದ ಕಾರಣ ರಶ್ಯವು ಆ್ಯಪ್ ಮೇಲೆ ನಿಷೇಧ ಹೇರಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕಾದ ತಂತ್ರಜ್ಞಾನ ಸಂಸ್ಥೆ ಮೆಟಾ (ವಾಟ್ಸ್ಯಾಪ್ನ ಮಾತೃಸಂಸ್ಥೆ) ಪ್ರತಿಕ್ರಿಯಿಸಿದೆ. ವಾಟ್ಸ್ಯಾಪ್ ವೇದಿಕೆಯ ಮೂಲಕ ಕರೆ ಮಾಡುವುದನ್ನು ಆಗಸ್ಟ್ ನಲ್ಲಿ ರಶ್ಯ ನಿಷೇಧಿಸಿದ್ದು ಇದು ಇಂಟರ್ನೆಟ್ ಮೇಲೆ ಸರಕಾರದ ನಿಯಂತ್ರಣವನ್ನು ಬಿಗಿಗೊಳಿಸುವ ಕ್ರಮವಾಗಿದೆ ಎಂದು ಟೀಕೆ ವ್ಯಕ್ತವಾಗಿತ್ತು.





