ಉಕ್ರೇನ್ ನ ಮತ್ತೊಂದು | ಗ್ರಾಮ ರಶ್ಯದ ವಶಕ್ಕೆ

ವ್ಲಾದಿಮಿರ್ ಪುಟಿನ್ | PC : PTI
ಮಾಸ್ಕೋ, ಜು.27: ಮಧ್ಯ ಉಕ್ರೇನ್ ನ ನಿಪ್ರೋ ಪ್ರಾಂತದಲ್ಲಿ ಎರಡನೇ ಗ್ರಾಮವನ್ನು ತನ್ನ ಪಡೆಗಳು ವಶಕ್ಕೆ ಪಡೆದಿರುವುದಾಗಿ ರಶ್ಯದ ಮಿಲಿಟರಿ ಘೋಷಿಸಿದೆ.
ಉಕ್ರೇನ್ ನ ಗಣಿ ಉದ್ಯಮದ ಕೇಂದ್ರಬಿಂದು ನಿಪ್ರೋ ಪ್ರಾಂತದ ಮಲಿಯೆವ್ಕಾ ಗ್ರಾಮವನ್ನು ತನ್ನ ಪಡೆಗಳು `ಸ್ವತಂತ್ರಗೊಳಿಸಿವೆ' ಎಂದು ರಶ್ಯದ ಸೇನೆ ಹೇಳಿದೆ. ಮಧ್ಯ ಉಕ್ರೇನ್ ನಲ್ಲಿ ರಶ್ಯದ ಪಡೆ ಗಮನಾರ್ಹ ಮುನ್ನಡೆ ಸಾಧಿಸಿದ್ದು ಆಯಕಟ್ಟಿನ ನಗರವಾಗಿರುವ ನಿಪ್ರೋದಿಂದ ಈಗ ಸುಮಾರು 200 ಕಿ.ಮೀ ದೂರದಲ್ಲಿವೆ ಎಂದು ಸೇನೆ ಹೇಳಿದೆ. ಉಕ್ರೇನ್ ನ ಡೊನೆಟ್ಸ್ಕ್, ಖೆರ್ಸಾನ್, ಲುಗಾಂಸ್ಕ್, ಝಪೋರಿಜಿಯಾ ಮತ್ತು ಕ್ರಿಮಿಯಾ ಈಗ ತನ್ನ ಭೂಪ್ರದೇಶಕ್ಕೆ ಸೇರಿದೆ ಎಂದು ರಶ್ಯ ಘೋಷಿಸಿದೆ.
Next Story





