ಭಾರತ-ಚೀನಾ ನಡುವೆ ಬಿರುಕು ಸೃಷ್ಟಿಸಲು ಪಾಶ್ಚಿಮಾತ್ಯರ ಪ್ರಯತ್ನ: ರಶ್ಯ ವಿದೇಶಾಂಗ ಸಚಿವರ ಆರೋಪ

ಸೆರ್ಗೆಯ್ ಲಾವ್ರೋವ್ | PC : NDTV
ಮಾಸ್ಕೋ: ನೆರೆಯ ರಾಷ್ಟ್ರಗಳ ನಡುವೆ ವೈರತ್ವವನ್ನು ಬೆಳೆಸಲು ಪಾಶ್ಚಿಮಾತ್ಯರು ಭಾರತ ಮತ್ತು ಚೀನಾ ನಡುವೆ ಬಿರುಕು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಶ್ಯದ ವಿದೇಶಾಂಗ ಸಚಿವರ ಸೆರ್ಗೆಯ್ ಲಾವ್ರೋವ್ ಆರೋಪಿಸಿದ್ದಾರೆ.
ಏಶ್ಯಾ ಪೆಸಿಫಿಕ್ ವಲಯದಲ್ಲಿನ ಪಾಶ್ಚಿಮಾತ್ಯ ತಂತ್ರಗಳನ್ನು ಏಶ್ಯಾದ ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಈಗ ಏಶ್ಯಾ-ಪೆಸಿಫಿಕ್ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿ. ಇಂಡೊ- ಪೆಸಿಫಿಕ್ ವಲಯದಲ್ಲಿ ಪಾಶ್ಚಿಮಾತ್ಯರು ಚೀನಾ ವಿರೋಧಿ ನೀತಿಯನ್ನು ಹರಡಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ಈ ಮೂಲಕ ನಮ್ಮ ಉತ್ತಮ ಸ್ನೇಹಿತರು ಮತ್ತು ನೆರೆಹೊರೆಯವರಾದ ಭಾರತ ಮತ್ತು ಚೀನಾ ನಡುವೆ ಮತ್ತಷ್ಟು ಘರ್ಷಣೆಯನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಲಾವ್ರೋವ್ ಪ್ರತಿಪಾದಿಸಿದ್ದಾರೆ.
ಪಾಶ್ಚಿಮಾತ್ಯರು ಏಶ್ಯಾದಲ್ಲಿ `ಆಸಿಯಾನ್'ನ ಪಾತ್ರವನ್ನು ದುರ್ಬಲಗೊಳಿಸಲು ಪಾಶ್ಚಿಮಾತ್ಯರು ಪ್ರಯತ್ನಿಸುತ್ತಿದ್ದಾರೆ. ಪಾಶ್ಚಿಮಾತ್ಯ ಸಹೋದ್ಯೋಗಿಗಳು, ವಿಶ್ವದ ಯಾವುದೇ ಭಾಗದಂತೆ, ಇಲ್ಲಿಯೂ ಪ್ರಮುಖ ಪಾತ್ರ ವಹಿಸಲು ಬಯಸುತ್ತಾರೆ. ಕೆಲವು ಆಸಿಯಾನ್ ಸದಸ್ಯರು ಪರಸ್ಪರ ಮುಖಾಮುಖಿಯಾಗಲು, ಪೈಪೋಟಿ ನಡೆಸಲು ಆಮಿಷವೊಡುತ್ತಿದ್ದಾರೆ ಎಂದು ಲಾವ್ರೋವ್ ಟೀಕಿಸಿದ್ದಾರೆ.





