ಉಕ್ರೇನ್ ಯುದ್ಧ ವಿರೋಧಿಸಿದ ರಶ್ಯದ ವಿಪಕ್ಷ ನಾಯಕ ಶ್ಲೋಷ್ಬರ್ಗ್ಗೆ 11 ವರ್ಷ ಜೈಲು ಶಿಕ್ಷೆ

ಶ್ಲೋಷ್ಬರ್ಗ್ | Photo Credit : X
ಹೊಸದಿಲ್ಲಿ, ಆ.18: ಉಕ್ರೇನ್ನೊಂದಿಗೆ ಯುದ್ಧ ವಿರೋಧಿಸುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ರಶ್ಯದ ರಾಜಕಾರಣಿ ಲೆವ್ ಶ್ಲೋಷ್ಬರ್ಗ್ ಅವರಿಗೆ 11 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ, ಶ್ಲೋಷ್ಬರ್ಗ್ ಅವರ ವಿರುದ್ಧ ಆರೋಪಗಳು ರಾಜಕೀಯ ಪ್ರೇರಿತವೆಂದು ಅವರ ಪಕ್ಷವಾದ ಯಾಬ್ಲೊಕೊದ ಉಪಾಧ್ಯಕ್ಷರು ಹೇಳಿದ್ದಾರೆ.
ರಶ್ಯದ ಪ್ರಮುಖ ಪ್ರತಿಪಕ್ಷ ನಾಯಕರಾದ ಲೆವ್ ಶ್ಲೋಷ್ಬರ್ಗ್ ಅವರಿಗೆ ಸ್ಕೊವ್ನ ನ್ಯಾಯಾಲಯವು 11 ವರ್ಷ ಹಾಗೂ ಒಂದು ತಿಂಗಳು ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆೆ. ಯುದ್ಧ ವಿರೋಧಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಹಾಗೂ ಉಕ್ರೇನ್ನಲ್ಲಿ ರಶ್ಯದ ಸೇನಾ ಕಾರ್ಯಾಚರಣೆಯನ್ನು ಖಂಡಿಸುವ ಪೋಸ್ಟ್ಗಳನ್ನು ಮಾಡಿದ್ದ ಆರೋಪದಲ್ಲಿ ಅವರನ್ನು ದೋಷಿಯೆಂದು ಘೋಷಿಸಲಾಗಿದೆ. ಆಗಸ್ಟ್ 17ರಂದು ನ್ಯಾಯಾಲಯವು ಅವರಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಯಾಬ್ಲೊಕೊ ರಶ್ಯದ ಏಕೈಕ ನೋಂದಾಯಿತ ರಾಜಕೀಯ ಪಕ್ಷವಾಗಿದ್ದು, ಅದು ಉಕ್ರೇನ್ ಜೊತೆಗಿನ ಯುದ್ಧವನ್ನು ಬಹಿರಂಗವಾಗಿ ವಿರೋಧಿಸಿತ್ತು. 1994ರಲ್ಲಿ ಯಾಬ್ಲೊಕೊ ಪಕ್ಷಕ್ಕೆ ಸೇರ್ಪಡೆಗೊಂಡ ಲೆವ್ ಮಾರ್ಕೊವಿಚ್ ಶ್ಲೋಸ್ಬರ್ಗ್ ಅವರು 2011ರಿಂದ 2015ರವರೆಗೆ ಹಾಗೂ 2016ರಿಂದ 2021ರವರೆಗೆ ಮತ್ತೊಮ್ಮೆಸ್ಕೊವ್ ಒಬ್ಲಾಸ್ಟ್ ಪ್ರಾಂತದ ವಿಧಾನಸಭೆಯಲ್ಲಿ ಜನಪ್ರತಿನಿಧಿಯಾಗಿದ್ದರು.̧




