ರಶ್ಯ ಸಂಸದೀಯ ಚುನಾವಣೆ: ಪುಟಿನ್ ಪಕ್ಷಕ್ಕೆ ಭರ್ಜರಿ ಗೆಲುವು

ವ್ಲಾಡಿಮಿರ್ ಪುಟಿನ್ | Photo Credit : PTI
ಮಾಸ್ಕೊ: ಉಕ್ರೇನ್ ವಿರುದ್ಧದ ಯುದ್ಧ ಆರಂಭವಾದ ನಂತರ ನಡೆದ ಮೊದಲ ಸಂಸದೀಯ ಚುನಾವಣೆಯಲ್ಲಿ ರಶ್ಯದ ಆಡಳಿತಾರೂಢ `ಯುನೈಟೆಡ್ ರಶ್ಯ' ಪಕ್ಷವು ಭಾರಿ ಜಯಗಳಿಸಿದೆ.
ಶೇಕಡಾ 90ರಷ್ಟು ಮತಗಳ ಎಣಿಕೆಯಾಗಿದ್ದು, ಯುನೈಟೆಡ್ ರಶ್ಯ ಪಕ್ಷವು ಸುಮಾರು 58% ಮತಗಳನ್ನು ಪಡೆದುಕೊಂಡಿದೆ.
ಕಮ್ಯುನಿಸ್ಟ್ ಪಾರ್ಟಿ 13.84% ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ರಾಷ್ಟ್ರವಾದಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ 8.9% ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂದು ವರದಿಯಾಗಿದೆ. ರಶ್ಯ ಸರಕಾರದ ಬಿಗಿ ನಿಯಂತ್ರಣದಲ್ಲಿ ನಡೆಸಿದ ಈ ಚುನಾವಣೆಯಲ್ಲಿ ನಿಜವಾದ ವಿರೋಧ ಪಕ್ಷಗಳೇ ಕಣದಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ.
Next Story




