ಉಕ್ರೇನ್ ಶಾಂತಿ ಮಾತುಕತೆಗೆ ರಶ್ಯ ಅಧ್ಯಕ್ಷ ಪುಟಿನ್ ಗೈರು

ವ್ಲಾದಿಮಿರ್ ಪುಟಿನ್ | PC : PTI
ಅಂಕಾರ: ಟರ್ಕಿಯಲ್ಲಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಸ್ತಾಪದಂತೆ ಗುರುವಾರದಿಂದ ಆರಂಭಗೊಂಡಿರುವ ಉಕ್ರೇನ್ ಶಾಂತಿ ಮಾತುಕತೆಯಲ್ಲಿ ಪುಟಿನ್ ಪಾಲ್ಗೊಂಡಿಲ್ಲ. ರಶ್ಯದ ಕೆಳಮಟ್ಟದ ನಿಯೋಗ ಪಾಲ್ಗೊಂಡಿರುವುದಾಗಿ ವರದಿಯಾಗಿದೆ.
ಪುಟಿನ್ ಅವರ ಈ ನಡೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಖಂಡಿಸಿದ್ದಾರೆ. ಪುಟಿನ್ ಅವರ ಆಪ್ತ ವ್ಲಾದಿಮಿರ್ ಮೆಡಿಂಸ್ಕಿ ಇತರ ಮೂವರು ಹಿರಿಯ ಅಧಿಕಾರಿಗಳಿರುವ ರಶ್ಯ ನಿಯೋಗದ ನೇತೃತ್ವ ವಹಿಸಿದ್ದಾರೆ. ಮಾತುಕತೆಯಲ್ಲಿ `ತಜ್ಞರಾಗಿ' ನಾಲ್ವರು ಕೆಳ-ಹಂತದ ಅಧಿಕಾರಿಗಳನ್ನು ಪುಟಿನ್ ನೇಮಿಸಿದ್ದಾರೆ ಎಂದು ರಶ್ಯದ ವಿದೇಶಾಂಗ ಇಲಾಖೆ ವಕ್ತಾರೆ ಮರಿಯಾ ಝಕರೋವ ಗುರುವಾರ ಹೇಳಿದ್ದಾರೆ. ರಕ್ಷಣಾ ಸಚಿವ ರುಸ್ತುಮ್ ಉಮೆರೊವ್, ವಿದೇಶಾಂಗ ಸಚಿವ ಅಂದ್ರಿಜಿ ಸಿಬಿಹ, ಉಕ್ರೇನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಆಂಡ್ರಿಯ್ ಯೆರ್ಮಾಕ್ ಉಕ್ರೇನ್ ನ ನಿಯೋಗದಲ್ಲಿದ್ದಾರೆ ಎಂದು ವರದಿ ಹೇಳಿದೆ.
Next Story





