ಟ್ರಂಪ್ ಗ್ರೀನ್ಲ್ಯಾಂಡ್ ಯೋಜನೆಗೂ ನಮಗೂ ಸಂಬಂಧವಿಲ್ಲ: ರಶ್ಯ ಅಧ್ಯಕ್ಷ ಪುಟಿನ್

ವ್ಲಾದಿಮಿರ್ ಪುಟಿನ್ | Photo Credit : PTI
ಮಾಸ್ಕೋ, ಜ.22: ಗ್ರೀನ್ಲ್ಯಾಂಡ್ ಸ್ವಾಧೀನಪಡಿಸಿಕೊಳ್ಳುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯ ಬಗ್ಗೆ ರಶ್ಯಕ್ಕೆ ಯಾವುದೇ ಕಳವಳವಿಲ್ಲ ಮತ್ತು ಇದು ನಮಗೆ ಸಂಬಂಧಿಸದ ವಿಷಯವಾಗಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಹೇಳಿದ್ದಾರೆ.
ಬುಧವಾರ ರಾತ್ರಿ ರಶ್ಯದ ರಾಷ್ಟೀಯ ಭದ್ರತಾ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ಪುಟಿನ್ `ಗ್ರೀನ್ಲ್ಯಾಂಡ್ನ ಭವಿಷ್ಯದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಇದನ್ನು ಸಂಬಂಧಪಟ್ಟವರು ಇತ್ಯರ್ಥ ಪಡಿಸಿಕೊಳ್ಳಬೇಕು' ಎಂದರು. ಗ್ರೀನ್ಲ್ಯಾಂಡ್ ದ್ವೀಪದ ವಿಷಯದಲ್ಲಿ ಡೆನ್ಮಾರ್ಕ್ ಕಠಿಣವಾಗಿ ನಡೆದುಕೊಂಡಿದ್ದು ಈ ಭೂಪ್ರದೇಶದ ಮೇಲೆ ಡೆನ್ಮಾರ್ಕ್ ಆಳ್ವಿಕೆಯು ವಸಾಹತುಶಾಹಿಯ ಸ್ವರೂಪದಲ್ಲಿದೆ ಎಂದು ಪುಟಿನ್ ಟೀಕಿಸಿದ್ದಾರೆ.
ರಶ್ಯವು ಯೋಜನೆಯನ್ನು ಅನುಮೋದಿಸಿಲ್ಲ ಅಥವಾ ವಿರೋಧಿಸಿಲ್ಲ. ಬದಲಿಗೆ ಎಚ್ಚರಿಕೆಯ, ಬದ್ಧತೆಯಿಲ್ಲದ ನಿಲುವನ್ನು ಆಯ್ಕೆ ಮಾಡಿಕೊಂಡಿದೆ. ಪಾಶ್ಚಿಮಾತ್ಯ ಒಕ್ಕೂಟದೊಳಗೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಲೆಕ್ಕಾಚಾರವನ್ನು ರಶ್ಯ ಹೊಂದಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.





