ಖಾರ್ಕಿವ್ ಮೇಲೆ ರಶ್ಯ ದಾಳಿ | 5 ಮಂದಿ ಸಾವು, 16 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ | PC : NDTV
ಕೀವ್: ಉಕ್ರೇನ್ನ ಈಶಾನ್ಯದ ನಗರ ಖಾರ್ಕಿವ್ ಮೇಲೆ ರಶ್ಯ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ 5 ಮಂದಿ ಮೃತಪಟ್ಟಿದ್ದು ಇತರ 16 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಖಾರ್ಕಿವ್ನ ಹೊರವಲಯದಲ್ಲಿರುವ ಮನೋರಂಜನಾ ಕೇಂದ್ರದ ಮೇಲೆ ರಶ್ಯದ ಎರಡು ಕ್ಷಿಪಣಿಗಳು ಅಪ್ಪಳಿಸಿದ್ದು 5 ಮಂದಿ ಮೃತರಾಗಿದ್ದಾರೆ. ಮನೋರಂಜನಾ ಕೇಂದ್ರಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ಖಾರ್ಕಿವ್ ಮೇಯರ್ ಇಹೋರ್ ತೆರೆಖೋವ್ ಮಾಹಿತಿ ನೀಡಿದ್ದಾರೆ.
Next Story