ರುವಾಂಡ ವಲಸೆ ಯೋಜನೆ ಅಕ್ರಮ: ಬ್ರಿಟನ್ ಹೈಕೋರ್ಟ್ ಘೋಷಣೆ
ಬ್ರಿಟನ್ ಪ್ರಧಾನಿ ಸುನಕ್ ಗೆ ಮತ್ತೊಂದು ಹಿನ್ನಡೆ

ರಿಷಿ ಸುನಕ್ | Photo: NDTV
ಲಂಡನ್: ಆಶ್ರಯ ಬಯಸಿ ಬ್ರಿಟನ್ ಗೆ ಬಂದಿರುವ ವಲಸಿಗರನ್ನು ರುವಾಂಡ ದೇಶಕ್ಕೆ ಕಳುಹಿಸುವ ಸರಕಾರದ ಯೋಜನೆ ಕಾನೂನು ಬಾಹಿರ ಎಂದು ಬ್ರಿಟನ್ ಸುಪ್ರೀಂಕೋರ್ಟ್ ಬುಧವಾರ ಘೋಷಿಸಿದ್ದು, ಈ ತೀರ್ಪು ವಲಸೆ ಕುರಿತು ಪ್ರಧಾನಿ ರಿಷಿ ಸುನಕ್ ಅವರ ಚುನಾವಣಾ ವಾಗ್ದಾನಕ್ಕೆ ಭಾರೀ ಹೊಡೆತವನ್ನು ನೀಡಿದೆ.
ರುವಾಂಡಾವನ್ನು ಸುರಕ್ಷಿತ ತೃತೀಯ ರಾಷ್ಟ್ರವೆಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ವಲಸಿಗರನ್ನು ಆ ದೇಶಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ರದ್ದುಗೊಳಿಸುವಂತೆ ಕೋರಿ ಸರಕಾರ ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ರುವಾಂಡಾಕ್ಕೆ ಕಳುಹಿಸಲಾದ ವಲಸಿಗರನ್ನು ಅಲ್ಲಿಂದ ಅವರ ಮೂಲದೇಶಕ್ಕೆ ಗಡೀಪಾರು ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ಈ ಯೋಜನೆ ಸೂಕ್ತವಲ್ಲ ಎಂದು ಐವರು ಸದಸ್ಯರ ನ್ಯಾಯಪೀಠದ ಅಧ್ಯಕ್ಷ ರಾಬರ್ಟ್ ರೀಡ್ ಪ್ರಕಟಿಸಿದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಬ್ರಿಟನ್ ಕಡಲತೀರಕ್ಕೆ ಸಣ್ಣ ಬೋಟುಗಳ ಮೂಲಕ ಆಗಮಿಸುವ ವಲಸಿಗರ ಸಮಸ್ಯೆಯನ್ನು ನಿಯಂತ್ರಿಸಲು ಸುನಕ್ ಸರಕಾರ , ವಲಸಿಗರನ್ನು ರವಾಂಡಾಕ್ಕೆ ರವಾನಿಸುವ ಯೋಜನೆ ರೂಪಿಸಿತ್ತು.





