ಚೀನಾ |ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಪದಚ್ಯುತ ಸಚಿವ ಕ್ವಿನ್ಗಾಂಗ್

ಕ್ವಿನ್ಗಾಂಗ್ | Photo: AP
ಬೀಜಿಂಗ್: ಚೀನಾದ ವಿದೇಶಾಂಗ ಸಚಿವ ಸ್ಥಾನದಿಂದ ಕಳೆದ ವರ್ಷ ಹಠಾತ್ ಪದಚ್ಯುತಗೊಂಡಿದ್ದ ಕ್ವಿನ್ ಗಾಂಗ್ ಇದೀಗ ತಮ್ಮ ಸಂಸದ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಸರಕಾರಿ ಸ್ವಾಮ್ಯದ `ಕ್ಸಿನ್ಹುವಾ' ವರದಿ ಮಾಡಿದೆ.
ಚೀನಾದ ತಿಯಾಂಜಿನ್ ಬಂದರು ನಗರವನ್ನು ಪ್ರತಿನಿಧಿಸುತ್ತಿದ್ದ ಕ್ವಿನ್ ನೀಡಿರುವ ರಾಜೀನಾಮೆಯನ್ನು ಸಂಸತ್ ಅಂಗೀಕರಿಸಿದೆ. ಸುಮಾರು 7 ತಿಂಗಳು ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಕ್ವಿನ್ರನ್ನು ಯಾವುದೇ ವಿವರಣೆ ನೀಡದೆ ಜುಲೈಯಲ್ಲಿ ಪದಚ್ಯುತಗೊಳಿಸಲಾಗಿದೆ. ಬಳಿಕ ಅವರನ್ನು ಸಂಪುಟ ಸಮಿತಿಯಿಂದಲೂ ವಜಾಗೊಳಿಸಲಾಗಿತ್ತು. ಅವರ ಸ್ಥಾನದಲ್ಲಿ ವಾಂಗ್ ಯಿ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಗಿದೆ.
Next Story





