Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಗಾಝಾದಲ್ಲಿ ಕುಸಿದ ಮರಳಿನ ದಿಬ್ಬ; ಐವರು...

ಗಾಝಾದಲ್ಲಿ ಕುಸಿದ ಮರಳಿನ ದಿಬ್ಬ; ಐವರು ಮೃತ್ಯು

ಯುದ್ಧದಿಂದ ಮನೆ ಕಳೆದುಕೊಂಡವರಿಗೆ ಡೇರೆಗಳೇ ಆಸರೆ; ಮಳೆ, ಚಳಿಯ ನಡುವೆ ಮತ್ತೊಂದು ದುರಂತದ ಭೀತಿ

ವಾರ್ತಾಭಾರತಿವಾರ್ತಾಭಾರತಿ9 Nov 2026 7:32 AM IST
share
ಗಾಝಾದಲ್ಲಿ ಕುಸಿದ ಮರಳಿನ ದಿಬ್ಬ; ಐವರು ಮೃತ್ಯು

ಡೀರ್ ಅಲ್-ಬಲಾಹ್ (ಗಾಝಾ): ಯುದ್ಧದಲ್ಲಿ ಮನೆ ಕಳೆದುಕೊಂಡು ತಾತ್ಕಾಲಿಕ ಡೇರೆಗಳಲ್ಲಿ ಆಶ್ರಯ ಪಡೆದಿರುವ ಫೆಲೆಸ್ತೀನಿಯರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ. ಇಸ್ರೇಲಿ ದಾಳಿಗಳ ಭೀತಿಯ ನಡುವೆ ಮಳೆ ಮತ್ತು ಚಳಿಯಿಂದಲೂ ರಕ್ಷಣೆ ಇಲ್ಲದ ಸ್ಥಿತಿಯಲ್ಲಿ ಬದುಕುತ್ತಿರುವ ಜನರಿಗೆ ಮತ್ತೊಂದು ದುರಂತ ಎದುರಾಗಿದೆ. ಡೀರ್ ಅಲ್-ಬಲಾಹ್‌ ನಲ್ಲಿ ರವಿವಾರ ಮರಳಿನ ದಿಬ್ಬ ಕುಸಿದು ಐವರು ಮೃತಪಟ್ಟಿದ್ದಾರೆ. ಈ ಘಟನೆ ನಿರಾಶ್ರಿತರಲ್ಲಿ ತೀವ್ರ ಆತಂಕ ಮೂಡಿಸಿದೆ ಎಂದು Aljazeera ವರದಿ ಮಾಡಿದೆ.

ಗಾಝಾದಲ್ಲಿ ಮನೆ ಕಳೆದುಕೊಂಡಿರುವ ಜನರಿಗೆ ಹರಿದುಹೋದ ಬಟ್ಟೆಗಳಿಂದ ನಿರ್ಮಿಸಿದ ತಾತ್ಕಾಲಿಕ ಡೇರೆಗಳೇ ಆಸರೆ. ಈ ಡೇರೆಗಳು ಭಾರಿ ಮಳೆಯಿಂದ ರಕ್ಷಣೆ ನೀಡುವಷ್ಟು ಗಟ್ಟಿಯಾಗಿಲ್ಲ. ಚಳಿಯಿಂದ ರಕ್ಷಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳೂ ಇಲ್ಲ. ಸುರಕ್ಷಿತ ಆಶ್ರಯ ಮತ್ತು ಬೆಚ್ಚಗಿನ ವಾತಾವರಣವಿಲ್ಲದೆ ಜನರು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ.

ರವಿವಾರ ಮರಳಿನ ದಿಬ್ಬ ಕುಸಿದಾಗ ಅದರ ಸಮೀಪದ ಡೇರೆಗಳಲ್ಲಿ ಆಶ್ರಯ ಪಡೆದಿದ್ದವರಿಗೆ ಅಪಾಯದಿಂದ ಪಾರಾಗಲು ಅವಕಾಶವೇ ಇರಲಿಲ್ಲ. ತಮ್ಮನ್ನು ರಕ್ಷಿಸಿಕೊಳ್ಳಲು ಅಥವಾ ಅಲ್ಲಿಂದ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗದಷ್ಟು ಅಸಹಾಯಕ ಸ್ಥಿತಿಯಲ್ಲಿ ಅವರು ಸಿಲುಕಿದ್ದರು. ಈ ದುರಂತವು ಗಾಝಾದ ನಿರಾಶ್ರಿತರು ಎದುರಿಸುತ್ತಿರುವ ಅಪಾಯಕಾರಿ ಬದುಕಿನ ವಾಸ್ತವವನ್ನು ಮತ್ತೊಮ್ಮೆ ತೆರೆದಿಟ್ಟಿದೆ.

ಮಳೆಗಾಲ ಮತ್ತು ಚಳಿಗಾಲದ ಆರಂಭದಲ್ಲೇ ಸಂಭವಿಸಿರುವ ದುರಂತ ಆತಂಕ ಮೂಡಿಸಿದೆ. ಗಾಝಾದಲ್ಲಿ ಮಾನವೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ಭಾರಿ ಮಳೆ ಮತ್ತು ಚಳಿಯಿಂದ ಇಂತಹ ಘಟನೆಗಳು ಮತ್ತೆ ಸಂಭವಿಸಬಹುದು ಎಂಬ ಭೀತಿ ಫೆಲೆಸ್ತೀನಿಯರನ್ನು ಕಾಡುತ್ತಿದೆ.

ಪರಿಹಾರ ಸಾಮಗ್ರಿಗಳಿಗೂ ನಿರ್ಬಂಧ

ನಿರಾಶ್ರಿತರಿಗೆ ಸುರಕ್ಷಿತ ಆಶ್ರಯ ಕಲ್ಪಿಸಲು ಉತ್ತಮ ಗುಣಮಟ್ಟದ ತಾತ್ಕಾಲಿಕ ಡೇರೆಗಳು ಹಾಗೂ ಅತ್ತಿತ್ತ ಕೊಂಡೊಯ್ಯಬಹುದಾದ ಮನೆಗಳನ್ನು (ಮೊಬೈಲ್ ಹೋಮ್ಸ್) ತಕ್ಷಣ ಗಾಝಾಕ್ಕೆ ಪೂರೈಸಬೇಕು ಎಂದು ಗಾಝಾದ ನಾಗರಿಕ ರಕ್ಷಣಾ ಪಡೆ (ಸಿವಿಲ್ ಡಿಫೆನ್ಸ್) ಮತ್ತು ಮಾನವೀಯ ನೆರವು ಸಂಸ್ಥೆಗಳು ನಿರಂತರವಾಗಿ ಒತ್ತಾಯಿಸುತ್ತಿವೆ.

ಅಮೆರಿಕದ ಮೇಲ್ವಿಚಾರಣೆಯಲ್ಲಿ ಏರ್ಪಟ್ಟ ಕದನ ವಿರಾಮ ಒಪ್ಪಂದದ ಮೊದಲ ಹಂತದಲ್ಲಿಯೇ ಈ ಪರಿಹಾರ ಸಾಮಗ್ರಿಗಳ ಪೂರೈಕೆಯ ಅಂಶವನ್ನು ಸೇರಿಸಲಾಗಿತ್ತು. ಆದರೆ, ಅಗತ್ಯ ಸಾಮಗ್ರಿಗಳು ಗಾಝಾ ಪ್ರವೇಶಿಸದಂತೆ ವ್ಯವಸ್ಥಿತ ನಿರ್ಬಂಧ ವಿಧಿಸಲಾಗಿದೆ.

ಇದರಿಂದಾಗಿ ಮನೆ ಕಳೆದುಕೊಂಡವರಿಗೆ ಉತ್ತಮ ಗುಣಮಟ್ಟದ ಡೇರೆಗಳು ಮತ್ತು ತಾತ್ಕಾಲಿಕ ಮನೆಗಳು ತಲುಪುತ್ತಿಲ್ಲ. ಪರಿಣಾಮ, ಫೆಲೆಸ್ತೀನಿಯರು ಇಸ್ರೇಲಿ ದಾಳಿಗಳ ಅಪಾಯದ ಜತೆಗೆ ಚಳಿಗಾಲದ ಕಠಿಣ ಹವಾಮಾನವನ್ನೂ ಎದುರಿಸಬೇಕಾಗಿದೆ. ಸುರಕ್ಷಿತ ಆಶ್ರಯ ಮತ್ತು ಅಗತ್ಯ ರಕ್ಷಣಾ ಸೌಲಭ್ಯಗಳಿಲ್ಲದೆ ನಿರಾಶ್ರಿತರ ಸಂಕಷ್ಟ ಮತ್ತಷ್ಟು ತೀವ್ರಗೊಂಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X