ಬಹರೈನ್ ಸಂಪರ್ಕಿಸುವ ಸೇತುವೆ ಮತ್ತೆ ತೆರೆದ ಸೌದಿ ಅರೇಬಿಯ

Photo Credit ; X
ದಬೈ, ಎ.7: ಇರಾನ್ನ ದಾಳಿಯ ಬೆದರಿಕೆಯ ಕಾರಣ ಕೆಲ ಹೊತ್ತು ಮುಚ್ಚಲಾಗಿದ್ದ, ಸೌದಿ ಅರೆಬಿಯಾವನ್ನು ಬಹರೈನ್ಗೆ ಸಂಪರ್ಕಿಸುವ ಪ್ರಮುಖ ಸೇತುವೆ `ದಿ ಕಿಂಗ್ ಫಹದ್ ಕಾಸ್ವೇ' ಯನ್ನು ಮತ್ತೆ ತೆರೆದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸೌದಿ ಅರೆಬಿಯಾದ ಪೂರ್ವ ಪ್ರಾಂತಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಇರಾನ್ನ ಬೆದರಿಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಂಗಳವಾರ ಬೆಳಿಗ್ಗೆ ಅಧಿಕಾರಿಗಳು ಘೋಷಿಸಿದ್ದರು. 25 ಕಿ.ಮೀ ಉದ್ದದ ಸೇತುವೆಯು ಅಮೆರಿಕ ನೌಕಾಪಡೆಯ 5ನೇ ಬಟಾಲಿಯನ್ ಇರುವ ಬಹರೈನ್ಗೆ ಯುಇಎಯಿಂದ ಏಕೈಕ ರಸ್ತೆ ಸಂಪರ್ಕವಾಗಿದೆ.
ಈ ಮಧ್ಯೆ, ಮಂಗಳವಾರ ಬೆಳಿಗ್ಗೆ ಪೂರ್ವ ಪ್ರಾಂತಗಳನ್ನು ಗುರಿಯಾಗಿಸಿದ್ದ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿರ್ಬಂಧಿಸಿರುವುದಾಗಿ ಸೌದಿಯ ರಕ್ಷಣಾ ಇಲಾಖೆ ಹೇಳಿದೆ.
Next Story





