ಸೌದಿ ಅರೇಬಿಯಾ ಪರಮಾಣು ಒಪ್ಪಂದಕ್ಕಾಗಿ ಇಸ್ರೇಲ್ ಅನ್ನು ಗುರುತಿಸಬೇಕು: ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಜು.23: ಸೌದಿ ಅರೇಬಿಯಾ ಪರಮಾಣು ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಅಮೆರಿಕ ಮತ್ತು ಸೌದಿ ಅರೇಬಿಯಾ ನಡುವಿನ ಒಪ್ಪಂದವು ಸೌದಿ ಅರೇಬಿಯಾವು ಇಸ್ರೇಲ್ ದೇಶವನ್ನು ಗುರುತಿಸುವುದರ ಮೇಲೆ ಅವಲಂಬಿತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
`ನಾಗರಿಕ ಪರಮಾಣು ಒಪ್ಪಂದ ಕೇವಲ ಮಿಲಿಟರಿಯೇತರ ಬಳಕೆಗೆ ಮಾತ್ರ ಸಂಬಂಧಿಸಿದ್ದು. ಇದನ್ನು ಅನುಮೋದಿಸಲಾಗುವುದು. ಆದರೆ ಇದು ಸೌದಿ ಅರೇಬಿಯಾವು ಅಬ್ರಹಾಂ ಒಪ್ಪಂದವನ್ನು ಸೇರುವುದಕ್ಕೆ ಸಂಪೂರ್ಣವಾಗಿ ಒಳಪಟ್ಟಿರುತ್ತದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಟ್ರಂಪ್ ಮಧ್ಯಸ್ಥಿಕೆಯ ಅಬ್ರಹಾಂ ಒಪ್ಪಂದವು ಯುಎಇ, ಬಹರೇನ್, ಸುಡಾನ್, ಮೊರಾಕೊ ಮತ್ತು ಕಝಕಸ್ತಾನ್ ದೇಶಗಳು ಇಸ್ರೇಲ್ ಅನ್ನು ಗುರುತಿಸಲು ಕಾರಣವಾಗಿದೆ. ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗದೆ ಇಸ್ರೇಲ್ ಅನ್ನು ಗುರುತಿಸುವುದಿಲ್ಲ ಎಂದು ಸೌದಿ ಅರೇಬಿಯಾ ಈ ಹಿಂದೆ ಹೇಳಿತ್ತು.
Next Story




