Saudi Arabia | ರಿಯಾದ್ ನತ್ತ ಹಾರಿಸಲಾಗಿದ್ದ 3 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದ ಸೌದಿ ನೇತೃತ್ವದ ಮೈತ್ರಿಪಡೆ

Photo Credit : X
ರಿಯಾದ್: ಸೌದಿ ಅರೇಬಿಯಾದ ರಿಯಾದ್ನತ್ತ ಹಾರಿಸಲಾಗಿದ್ದ 3 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದು ನಾಶಪಡಿಸಿರುವುದಾಗಿ ಸೌದಿ ನೇತೃತ್ವದ ಮೈತ್ರಿಪಡೆ ತಿಳಿಸಿದೆ.
ಗುರುವಾರ ಸೌದಿ ರಾಜಧಾನಿಯ ಅತಿ ಎತ್ತರದ ಗಗನಚುಂಬಿ ಕಟ್ಟಡವೊಂದರ ಮೇಲೆ ದಾಳಿ ನಡೆದಿತ್ತು, ಇದಾದ ಕೆಲವೇ ದಿನಗಳಲ್ಲಿ ಹೂತಿಗಳು ನಡೆಸಿದ ಎರಡನೇ ದಾಳಿ ಇದಾಗಿದೆ.
ರಿಯಾದ್ ನಲ್ಲಿ ಜೋರಾದ ಸ್ಫೋಟದ ಸದ್ದು ಕೇಳಿಸುವ ಸ್ವಲ್ಪ ಮೊದಲು, ಆಕಾಶದಲ್ಲಿ ಒಂದು ವಸ್ತು ವೇಗವಾಗಿ ಸಾಗಿಹೋಗುವುದನ್ನು ಪ್ರತ್ಯಕ್ಷದರ್ಶಿಯೊಬ್ಬರು ಗಮನಿಸಿದ್ದಾರೆ ಎಂದು reuters ವರದಿ ಮಾಡಿದೆ.
ಶನಿವಾರ ಮುಂಜಾನೆ ರಿಯಾದ್ ನಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ ಎಂದು ಸೌದಿ ಅರೇಬಿಯಾದ ರಾಜಧಾನಿಯಲ್ಲಿರುವ AFP ಪತ್ರಕರ್ತರೊಬ್ಬರು ಹೇಳಿದ್ದಾರೆ.
Next Story




