ವಾಯುಪ್ರದೇಶಕ್ಕೆ ನುಗ್ಗಿದ 8 ಡ್ರೋನ್ ಹೊಡೆದುರುಳಿಸಿದ್ದೇವೆ: ಸೌದಿ ಅರೇಬಿಯಾ

ಸಾಂದರ್ಭಿಕ ಚಿತ್ರ | Photo Credit : aljazeera.com
ರಿಯಾದ್: ದೇಶದ ವಾಯುಪ್ರದೇಶವನ್ನು ಪ್ರವೇಶಿಸಿದ ಎಂಟು ಡ್ರೋನ್ಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಈ ಕುರಿತು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಸೌದಿ ವಾಯು ರಕ್ಷಣಾ ಪಡೆಗಳು ದೇಶದ ವಾಯುಪ್ರದೇಶಕ್ಕೆ ನುಗ್ಗಿದ ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದ ಕುರಿತು ಅಥವಾ ಡ್ರೋನ್ ಗಳನ್ನು ಯಾರು ಹಾರಿಸಿದ್ದಾರೆ ಎಂಬುದರ ಕುರಿತು ತಕ್ಷಣವೇ ಹೆಚ್ಚಿನ ವಿವರಗಳನ್ನು ನೀಡಿಲ್ಲ.
Next Story





