ಮಕ್ಕಾ ಕಡೆಗೆ ತೆರಳುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಸೌದಿ ವಾಯು ರಕ್ಷಣಾ ವ್ಯವಸ್ಥೆ: ವರದಿ
ದಾಳಿ ಆರೋಪವನ್ನು ನಿರಾಕರಿಸಿದ ಹೌದಿಗಳು

Photo credit | X
ಸೌದಿ ಅರೇಬಿಯಾ : ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮಕ್ಕಾ ಕಡೆಗೆ ಹೌದಿಗಳು ಉಡಾಯಿಸಿದ್ದ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿರುವ ಬಗ್ಗೆ Aljazeera ವರದಿ ಮಾಡಿದೆ.
ಮಕ್ಕಾ ನಗರದ ನಿಷೇಧಿತ ವಾಯುಪ್ರದೇಶವನ್ನು ಪ್ರವೇಶಿಸುವ ಮುನ್ನ, ನಗರದ ದಕ್ಷಿಣ ಭಾಗದಲ್ಲಿ ಹೌದಿಗಳು ಉಡಾಯಿಸಿದ್ದ ಡ್ರೋನ್ ಅನ್ನು ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಯಮನ್ನಲ್ಲಿನ ಸೌದಿ ನೇತೃತ್ವದ ಸೇನಾ ವಕ್ತಾರರು ತಿಳಿಸಿದ್ದಾರೆ.
ಆದರೆ, ಮಕ್ಕಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಆರೋಪವನ್ನು ಹೌದಿಗಳು ನಿರಾಕರಿಸಿದ್ದಾರೆ.
ಹೌದಿಗಳು ಸೌದಿ ಅರೇಬಿಯಾ ಮೇಲೆ ದಾಳಿ ಹಿನ್ನೆಲೆಯಲ್ಲಿ, ಪವಿತ್ರ ನಗರ ಮಕ್ಕಾದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ ನೀಡಲಾಗಿತ್ತು.
Next Story




