ರಿಯಾದ್, ಅಲ್-ಖರ್ಜ್ ಕಡೆಗೆ ಹಾರಿದ 8 ಡ್ರೋನ್ ಗಳನ್ನು ಹೊಡೆದುರುಳಿಸಿದ ಸೌದಿ ಪಡೆ

PC: x.com/Saudi_Gazette
ರಿಯಾದ್: ರಾಜಧಾನಿ ರಿಯಾದ್ ಹಾಗೂ ಹತ್ತಿರದ ಅಲ್-ಖಾರ್ಜ್ ನಗರದತ್ತ ದಾಳಿ ಉದ್ದೇಶದಿಂದ ಹಾರುತ್ತಿದ್ದ ಕನಿಷ್ಠ ಎಂಟು ಡ್ರೋನ್ಗಳನ್ನು ಸೌದಿ ಅರೇಬಿಯಾದ ವಾಯು ರಕ್ಷಣಾ ಪಡೆಗಳು ತಡೆದು ನಾಶಪಡಿಸಿವೆ ಎಂದು ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಡ್ರೋನ್ಗಳು ಯಾವ ಮೂಲದಿಂದ ಉಡಾಯಿಸಲ್ಪಟ್ಟವು, ದಾಳಿಯ ಹಿಂದೆ ಯಾರು ಇದ್ದರು ಎಂಬುದರ ಕುರಿತು ತಕ್ಷಣ ಯಾವುದೇ ಮಾಹಿತಿ ಪ್ರಕಟಿಸಲಾಗಿಲ್ಲ. ಘಟನೆಯ ಕುರಿತು ತನಿಖೆ ಮುಂದುವರಿದಿದೆ ಎಂದು ಸಚಿವಾಲಯ ಹೇಳಿದೆ.
ಇದೇ ವೇಳೆ, ಮಂಗಳವಾರ ಮುಂಜಾನೆ ರಿಯಾದ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೇಲೆ ಕನಿಷ್ಠ ಎರಡು ಡ್ರೋನ್ ದಾಳಿಗಳು ನಡೆದಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ದಾಳಿಯಿಂದ ರಾಯಭಾರ ಕಚೇರಿ ಸಂಕೀರ್ಣದೊಳಗಿನ ಕಟ್ಟಡದಲ್ಲಿ ಸೀಮಿತ ಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಪ ಪ್ರಮಾಣದ ವಸ್ತು ಹಾನಿ ಸಂಭವಿಸಿದೆ ಎಂದು ತಿಳಿಸಲಾಗಿದೆ.
ಘಟನೆಯ ನಂತರ ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ.






