ಸೌದಿ ರಾಜಕುಮಾರ ಇರಾನ್ ಮೇಲೆ ದಾಳಿ ಮಾಡಲು ʼಲಾಬಿ' ನಡೆಸಿದ್ದರು: Washington Post ವರದಿ

ಮುಹಮ್ಮದ್ ಬಿನ್ ಸಲ್ಮಾನ್ , ಡೊನಾಲ್ಡ್ ಟ್ರಂಪ್ | Photo Credit : AP , PTI
ನ್ಯೂಯಾರ್ಕ್: ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಸಾರ್ವಜನಿಕವಾಗಿ ರಾಜತಾಂತ್ರಿಕತೆಗೆ ಒಲವು ತೋರಿದರೂ ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅನೇಕ ಖಾಸಗಿ ಕರೆಗಳನ್ನು ಮಾಡಿ ಇರಾನ್ ಮೇಲೆ ದಾಳಿ ನಡೆಸಬೇಕೆಂದು ʼಲಾಬಿ' ನಡೆಸಿದ್ದರು ಎಂದು Washington Post ವರದಿ ಮಾಡಿದೆ.
ಇರಾನ್ ಮೇಲಿನ ದಾಳಿಗೆ ತಮ್ಮ ದೇಶದ ವಾಯುಪ್ರದೇಶ ಅಥವಾ ಪ್ರದೇಶವನ್ನು ಬಳಸಲು ಅವಕಾಶ ನೀಡುವುದಿಲ್ಲ. ಇರಾನ್ನ ಸಾರ್ವಭೌಮತ್ವವನ್ನು ಸೌದಿ ಅರೆಬಿಯಾ ಗೌರವಿಸುತ್ತದೆ ಮತ್ತು ಇರಾನ್ ಹಾಗೂ ಅಮೆರಿಕ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಒತ್ತಾಯಿಸುತ್ತದೆ ಎಂದು ಜನವರಿಯಲ್ಲಿ ಯುವರಾಜ ಹೇಳಿಕೆ ನೀಡಿದ್ದರು.
Next Story




