ಅಪಘಾತದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿನಿ ; ಖೇದ ವ್ಯಕ್ತಪಡಿಸಿದ ಸಿಯಾಟಲ್ ಮೇಯರ್

ಹೊಸದಿಲ್ಲಿ: ಭಾರತೀಯ ವಿದ್ಯಾರ್ಥಿನಿಯ ಅಪಘಾತ ಘಟನೆಯ ಬಗ್ಗೆ ತಮಾಷೆ ಮಾಡಿದ ಪೊಲೀಸರ ಬಾಡಿಕ್ಯಾಮ್ ದೃಶ್ಯಗಳು ವೈರಲ್ ಆದ ಕೆಲವು ದಿನಗಳ ನಂತರ ಸಿಯಾಟಲ್ ಮೇಯರ್ ಘಟನೆಯ ಕುರಿತು ಖೇದ ವ್ಯಕ್ತಪಡಿಸಿದ್ದಾರೆ.
ಜಾಹ್ನವಿ ಕಂದುಲಾ ಅವರ ಮೇಲೆ ಪೊಲೀಸ್ ಕಾರು ಹರಿದ ನಂತರ ಮಾರಣಾಂತಿಕ ಅಪಘಾತದ ಬಗ್ಗೆ ಅಧಿಕಾರಿ ಡೇನಿಯಲ್ ಆಡೆರೆರ್ ನಗುತ್ತಿರುವುದು ಬಾಡಿಕ್ಯಾಮ್ ಫೂಟೇಜ್ ನಲ್ಲಿ, ಕಂಡುಬಂದಿತ್ತು.
ಮೇಯರ್ ಬ್ರೂಸ್ ಹ್ಯಾರೆಲ್ ಅವರು ಡೇನಿಯಲ್ ಆಡೆರರ್ ಅವರು ಮಾಡಿದ ಸಂವೇದನಾರಹಿತ ವರ್ತನೆಗಾಗಿ ಅಮೇರಿಕಾದಲ್ಲಿರುವ ಭಾರತೀಯ ಸಮುದಾಯದವರಲ್ಲಿ ಕ್ಷಮೆಯಾಚಿಸಿದ್ದಾರೆ.
" ದುರದೃಷ್ಟಕರ ಮತ್ತು ಸಂವೇದನಾರಹಿತ ಹೇಳಿಕೆಗಳಿಂದಾಗಿ ಭಾರತೀಯ ಸಮುದಾಯದ ಸದಸ್ಯರು ಒಗ್ಗೂಡಿದ್ದಾರೆ, ನಿಮಗೆ ಆಗಿರುವ ನಷ್ಟಕ್ಕೆ ನನ್ನ ಸಂತಾಪ" ಎಂದು ಅವರು ಹೇಳಿದ್ದಾರೆ
ಸಿಯಾಟಲ್ ಪೊಲೀಸ್ ಮುಖ್ಯಸ್ಥ ಆಡ್ರಿಯನ್ ಡಯಾಝ್ ಕೂಡ 23 ವರ್ಷದ ವಿದ್ಯಾರ್ಥಿನಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಈ ಪ್ರದೇಶದಲ್ಲಿ ಭಾರತೀಯ ಸಮುದಾಯವನ್ನು ಪ್ರತಿನಿಧಿಸುವ ಸುಮಾರು 20 ಜನರು ಶನಿವಾರ ಸಿಯಾಟಲ್ ಮೇಯರ್ ಮತ್ತು ಪೊಲೀಸ್ ಮುಖ್ಯಸ್ಥರನ್ನು ಭೇಟಿಯಾಗಿದ್ದರು.