Nvidia ಸಿಇಒ ಹುವಾಂಗ್ ರಾಜೀನಾಮೆಗೆ ರಿಪಬ್ಲಿಕನ್ ಸೆನೆಟರ್ ಪಟ್ಟು
ಚೀನಾದ ಉದ್ಯಮಿಯೊಂದಿಗಿನ ಸಂಬಂಧದ ಬಗ್ಗೆ FBI ಪರಿಶೀಲನೆ; ಟ್ರಂಪ್ ಹೇಳಿಕೆ ಬೆನ್ನಲ್ಲೇ ಆಗ್ರಹ

ಜೆನ್ಸನ್ ಹುವಾಂಗ್ (Photo: PTI)
ವಾಷಿಂಗ್ಟನ್: ಅಮೆರಿಕದ ಪ್ರಮುಖ ಚಿಪ್ ತಯಾರಿಕಾ ಕಂಪೆನಿ Nvidia ಸಿಇಒ ಜೆನ್ಸನ್ ಹುವಾಂಗ್ ಅವರ ರಾಜೀನಾಮೆಗೆ ರಿಪಬ್ಲಿಕನ್ ಪಕ್ಷದ ಸೆನೆಟರ್ ಕೆವಿನ್ ಕ್ರೇಮರ್ ಒತ್ತಾಯಿಸಿದ್ದಾರೆ. ಹುವಾಂಗ್ ಅವರೊಂದಿಗಿನ ಸೂಕ್ಷ್ಮ ತಂತ್ರಜ್ಞಾನದ ಸಂಬಂಧಿತ ಅಪಾಯಗಳನ್ನು ಉಲ್ಲೇಖಿಸಿ ಆಗ್ರಹಿಸಿದ್ದಾರೆ.
ಸೆನೆಟ್ ಬ್ಯಾಂಕಿಂಗ್ ಸಮಿತಿಯ ಸದಸ್ಯರೂ ಆಗಿರುವ ಕ್ರೇಮರ್, Nvidia ತಯಾರಿಸುವ ಚಿಪ್ ಗಳು ಅತ್ಯಂತ ಸೂಕ್ಷ್ಮ ತಂತ್ರಜ್ಞಾನಕ್ಕೆ ಸೇರಿವೆ. ಇಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಸುಲಿಗೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಈ ಚಿಪ್ ಗಳಂತಹ ಸೂಕ್ಷ್ಮ ವಸ್ತುಗಳನ್ನು ಹುವಾಂಗ್ ಅವರಿಂದ ದೂರವಿಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
Next Story




