ಚೀನಾ | ಹಿರಿಯ ರಾಜತಾಂತ್ರಿಕ ಲಿಯು ಜಿಯಾಂಚಾವೊ ಬಂಧನ

Photo Credit: AFP
ಬೀಜಿಂಗ್, ಆ.10: ಚೀನಾದ ಹಿರಿಯ ರಾಜತಾಂತ್ರಿಕ, ಭವಿಷ್ಯದ ವಿದೇಶಾಂಗ ಸಚಿವ ಎಂದು ಬಿಂಬಿಸಲ್ಪಟ್ಟಿದ್ದ ಲಿಯು ಜಿಯಾಂಚಾವೊರನ್ನು ತನಿಖೆಗಾಗಿ ಬಂಧಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ದಿ ವಾಲ್ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.
ಜುಲೈ ಅಂತ್ಯದಲ್ಲಿ ಸಾಗರೋತ್ತರ ಪ್ರವಾಸದಿಂದ ಬೀಜಿಂಗ್ಗೆ ಬಂದಿಳಿದ ತಕ್ಷಣ ಲಿಯು ಅವರನ್ನು ಬಂಧಿಸಲಾಗಿದ್ದು ಅಜ್ಞಾತ ಸ್ಥಳಕ್ಕೆ ತನಿಖೆಗೆಂದು ಕರೆದೊಯ್ಯಲಾಗಿದೆ. ಬಂಧನಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಲಿಯು ಕಮ್ಯುನಿಸ್ಟ್ ಪಾರ್ಟಿಯ ಅಂತರಾಷ್ಟ್ರೀಯ ವಿಭಾಗದ ಮುಖ್ಯಸ್ಥರಾಗಿ 2022ರ ಮೇ ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಲಿಯು ಅವರನ್ನು ವಿದೇಶಾಂಗ ಸಚಿವ ವಾಂಗ್ ಯಿ ಅವರ ಸ್ಥಾನದಲ್ಲಿ ನೇಮಕಗೊಳಿಸುವ ನಿರೀಕ್ಷೆಯಿತ್ತು ಎಂದು ವರದಿ ಹೇಳಿದೆ.
Next Story





