ಹಾರ್ಮುಝ್ ನಲ್ಲಿ ಏಳು ಟ್ಯಾಂಕರ್ ಗಳಿಗೆ ಹಾನಿ

ಸಾಂದರ್ಭಿಕ ಚಿತ್ರ
ಟೆಹರಾನ್, ಅ. 22: ಬುಧವಾರ ರಾತ್ರಿ ಹಾರ್ಮುಝ್ ಜಲಸಂಧಿಯಲ್ಲಿ ಏಳು ತೈಲ ಟ್ಯಾಂಕರ್ಗಳು ಇರಾನ್ನ ದಾಳಿಗೆ ತುತ್ತಾಗಿ ಅಥವಾ ಸಮುದ್ರದಡಿಯ ಸ್ಫೋಟಕಗಳಿಗೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿವೆ ಇಲ್ಲವೇ ಹಾನಿಗೊಳಗಾಗಿವೆ. ಒಂದೇ ರಾತ್ರಿಯಲ್ಲಿ ವರದಿಯಾದ ಈ ಘಟನೆಗಳು ಪೂರ್ಣ ಪ್ರಮಾಣದ ಯುದ್ಧ ಮತ್ತೆ ಆರಂಭವಾಗಬಹುದು ಎಂಬ ಆತಂಕವನ್ನು ಹೆಚ್ಚಿಸಿವೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ನೌಕಾಪಡೆಯನ್ನು ಉಲ್ಲೇಖಿಸಿ ಇರಾನ್ ನ ಸರಕಾರಿ ಸ್ವಾಮ್ಯದ ದೂರದರ್ಶನ ಈ ದಾಳಿಗಳ ಕುರಿತು ವರದಿ ಮಾಡಿದೆ. ಆದರೆ, ಯಾವುದೇ ಸಾವು-ನೋವಿನ ಬಗ್ಗೆ ಉಲ್ಲೇಖಿಸಿಲ್ಲ.
ವಾಣಿಜ್ಯ ಹಡಗುಗಳು ಜಲಸಂಧಿಯಲ್ಲಿ ಸಂಚರಿಸಲು ಅಮೆರಿಕ ಸಹಾಯ ಮಾಡುವುದನ್ನು ಮುಂದುವರಿಸಿದರೆ, ಪ್ರಾದೇಶಿಕ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸುವುದಾಗಿ ಐಆರ್ಜಿಸಿ ಬೆದರಿಕೆ ಹಾಕಿದೆ.
Next Story




