ಕೆನಡಾ ಸೇನಾ ನೆಲೆಯಲ್ಲಿ ಸ್ಫೋಟ: ಹಲವರು ಮೃತಪಟ್ಟಿರುವ ಶಂಕೆ

Photo: Reuters
ಟೊರಾಂಟೊ: ಕೆನಡಾದ ಆಲ್ಬರ್ಟಾದಲ್ಲಿನ ಸೇನಾ ನೆಲೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಹಲವರು ಮೃತಪಟ್ಟಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನೇಯ ಎಡ್ಮಾಂಟನ್ ನಿಂದ ಸುಮಾರು 180 ಕಿಮೀ ದೂರವಿರುವ ವೈನ್ ರೈಟ್ ಬಳಿಯ ರಕ್ಷಣಾ ನೆಲೆಯೊಂದರಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಈ ಪ್ರಾಂತ್ಯದ ಸಂಸದ ಡೇನ್ ಲಾಯ್ಡ್, “ಸ್ಫೋಟ ಮತ್ತು ಅಗ್ನಿ ಅವಘಡದಿಂದ ಗಮನಾರ್ಹ ಪ್ರಮಾಣದ ಸಾವುನೋವು ಸಂಭವಿಸಿದೆ ಎಂಬ ಮಾಹಿತಿಯಿದೆ” ಎಂದು ಹೇಳಿದ್ದಾರೆ.
ವೈನ್ ರೈಟ್ ನಿಂದ ಆಸ್ಪತ್ರೆಗಳಿಗೆ ಕರೆ ತರಲಾಗಿರುವ ರೋಗಿಗಳಿಗೆ ನೆರವು ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಎಡ್ಮಾಂಟನ್ ನ ರಾಯಲ್ ಅಲೆಕ್ಸಾಂಡ್ರಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ವಾರೆನ್ ಥರ್ಸ್ಕ್ ತಿಳಿಸಿದ್ದಾರೆ.
ಸ್ಪೋಟದಿಂದ ಭಾರಿ ಪ್ರಮಾಣದ ಹೊಗೆ ಹೊರ ಬರುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Next Story




