ಸ್ವತಂತ್ರವಲ್ಲದ ನ್ಯಾಯಮಂಡಳಿ ನೀಡಿರುವ ಆದೇಶ: ಶೇಕ್ ಹಸೀನಾ

ಶೇಕ್ ಹಸೀನಾ | Photo Credit : PTI
ಢಾಕಾ: ಬಾಂಗ್ಲಾದೇಶದ ನ್ಯಾಯಮಂಡಳಿಯೊಂದು ತನಗೆ ನೀಡಿರುವ ಮರಣ ದಂಡನೆಗೆ ಪ್ರತಿಕ್ರಿಯಿಸಿರುವ, ಆ ದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ, ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ‘‘ಜನರಿಂದ ಚುನಾಯಿತವಾಗದ ಸರಕಾರವೊಂದು ಸ್ಥಾಪಿಸಿದ ಹಾಗೂ ಉಸ್ತುವಾರಿ ವಹಿಸಿದ ಸ್ವತಂತ್ರವಲ್ಲದ ನ್ಯಾಯಮಂಡಳಿಯೊಂದು ನೀಡಿರುವ ಆದೇಶ ಇದಾಗಿದೆ’’ ಎಂದು ಅವರು ಹೇಳಿದ್ದಾರೆ.
‘‘ಈ ಆದೇಶವು ಪಕ್ಷಪಾತಿಯಾಗಿದೆ ಮತ್ತು ರಾಜಕೀಯ ಪ್ರೇರಿತವಾಗಿದೆ. ಬಾಂಗ್ಲಾದೇಶದ ಕೊನೆಯ ಚುನಾಯಿತ ಪ್ರಧಾನಿಯನ್ನು ನಿವಾರಿಸುವ ಹಾಗೂ ರಾಜಕೀಯ ಶಕ್ತಿಯಾಗಿ ಅವಾಮಿ ಲೀಗನ್ನು ನಾಶಪಡಿಸುವ ಕೊಲೆಗಡುಕ ಉದ್ದೇಶವನ್ನು ಮಧ್ಯಂತರ ಸರಕಾರದದಲ್ಲಿರುವ ತೀವ್ರವಾದಿ ವ್ಯಕ್ತಿಗಳು ಹೊಂದಿದ್ದಾರೆ. ಮರಣ ದಂಡನೆಯನ್ನು ವಿಧಿಸುವ ಈ ಅಸಹ್ಯಕರ ತೀರ್ಪು ಆ ಉದ್ದೇಶವನ್ನು ಹೊರಗೆಡವಿದೆ’’ ಎಂದು ಹೇಳಿಕೆಯೊಂದರಲ್ಲಿ ಹಸೀನಾ ಹೇಳಿದ್ದಾರೆ.
Next Story





