ಜೋರ್ಡಾನ್ನ ಚರ್ಚ್ನಲ್ಲಿ ಗುಂಡಿನ ದಾಳಿ| ಕನಿಷ್ಠ 7 ಜನರು ಮೃತ್ಯು

Photo Credit : X
ಅಮ್ಮಾನ್: ದಕ್ಷಿಣ ಜೋರ್ಡಾನ್ನ ಚರ್ಚ್ ಒಂದರಲ್ಲಿ ಶುಕ್ರವಾರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ ಮತ್ತು 10 ಜನರು ಗಾಯಗೊಂಡಿದ್ದಾರೆ. ಕರಾಕ್ ಪ್ರಾಂತದ ಹಮ್ಮೌದ್ ಚರ್ಚ್ನಲ್ಲಿ ಈ ದಾಳಿ ನಡೆದಿದೆ ಎಂದು ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ತಿಳಿಸಿದೆ.
ಬಂದೂಕುಧಾರಿಗಳು ವಾಹನದಲ್ಲಿ ಆಗಮಿಸಿ, ಪಲಾಯನ ಮಾಡುವ ಮುನ್ನ ಸತತ ಐದು ನಿಮಿಷಗಳ ಕಾಲ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ಸುಮಾರು 150 ರಿಂದ 200 ಜನರು ಚರ್ಚ್ನ ಒಳಗೆ ಮತ್ತು ಸುತ್ತಮುತ್ತ ಇದ್ದರು ಎಂದು ಪ್ರತ್ಯಕ್ಷದರ್ಶಿಯನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.
Next Story




