ಪೆನ್ಸಿಲ್ವೇನಿಯಾದ ಮನೆಯಲ್ಲಿ ಗುಂಡಿನ ದಾಳಿ: ಇಬ್ಬರು ಮಕ್ಕಳು ಸೇರಿದಂತೆ 9 ಮಂದಿ ಮೃತ್ಯು

Photo Credit : x
ನ್ಯೂಯಾರ್ಕ್, ಅ.10: ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಈರಿ ನಗರದಲ್ಲಿ ಶುಕ್ರವಾರ ಸಂಜೆ ಮನೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಮತ್ತು ಓರ್ವ ಗರ್ಭಿಣಿ ಮಹಿಳೆ ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಶಂಕಿತ ಬಂದೂಕುಧಾರಿ ಬಳಿಕ ತನಗೆ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಸಮಯ ಸಂಜೆ 5ರ ಸುಮಾರಿಗೆ ಗುಂಡಿನ ದಾಳಿಯ ಬಗ್ಗೆ ಮಾಹಿತಿ ಬಂದ ಬಳಿಕ ಪೊಲೀಸರು ಮನೆಗೆ ಧಾವಿಸಿದರು. ಮನೆಯ ಹೊರಗೆ ಇಬ್ಬರು ಮಹಿಳೆಯರ ಶವಗಳು ಪತ್ತೆಯಾಗಿದ್ದು, ಇತರ ಸಂತ್ರಸ್ತರು ಮನೆಯ ಒಳಗೆ ಪತ್ತೆಯಾಗಿದ್ದಾರೆ.
ಆರೋಪಿ ಇಬ್ಬರು ಮಹಿಳೆಯರಿಗೆ ಗುಂಡು ಹಾರಿಸಿದ ಬಳಿಕ ಮನೆಗೆ ನುಗ್ಗಿ ಒಳಗಿದ್ದ ಹಲವರ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಆತ ಮನೆಯಲ್ಲೇ ಅಡಗಿ ಕುಳಿತಿದ್ದ. ಪೊಲೀಸರು ಶೋಧ ಕಾರ್ಯ ಮುಂದುವರಿಸಿದಾಗ ಶಂಕಿತನು ತನಗೆ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.
Next Story




