ಅಮೆರಿಕದ ಚರ್ಚ್ ನಲ್ಲಿ ಶೂಟೌಟ್: ಇಬ್ಬರು ಮಹಿಳೆಯರ ಹತ್ಯೆ

PC | NDTV (ಸಾಂದರ್ಭಿಕ ಚಿತ್ರ)
ನ್ಯೂಯಾರ್ಕ್, ಜು.14: ಅಮೆರಿಕದ ಕೆಂಟುಕಿ ರಾಜ್ಯದ ಲೆಕ್ಸಿಂಗ್ಟನ್ ನಗರದಲ್ಲಿನ ಚರ್ಚ್ ನಲ್ಲಿ ರವಿವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಫಯೆಟ್ ಕೌಂಟಿಯ ವಿಮಾನ ನಿಲ್ದಾಣದ ಹೊರಗಡೆ ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದ ಶಂಕಿತ ಆರೋಪಿ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿ ಅಲ್ಲಿಯೇ ನಿಲ್ಲಿಸಲಾಗಿದ್ದ ಕಾರನ್ನು ಅಪಹರಿಸಿ ಪರಾರಿಯಾಗಿದ್ದ. ಬಳಿಕ ಲೆಕ್ಸಿಂಗ್ಟನ್ ನಗರದಲ್ಲಿನ ಬ್ಯಾಪ್ಟಿಸ್ಟ್ ಚರ್ಚ್ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದ. ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.
Next Story





