ಭೂಮಿಯತ್ತ ಮರು ಪ್ರಯಾಣ ಆರಂಭಿಸಿದ ಶುಭಾಂಶು ಶುಕ್ಲಾ ಮತ್ತು ಆಕ್ಸಿಯಾಮ್ ಮಿಷನ್ ತಂಡ

PC : @airnewsalerts
ವಾಷಿಂಗ್ಟನ್, ಜು.14: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು 18 ದಿನ ಕಳೆದ ಬಳಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹಾಗೂ ಆಕ್ಸಿಯಾಮ್ ಮಿಷನ್ ತಂಡ ಭೂಮಿಯತ್ತ ಸೋಮವಾರ ಮರು ಪ್ರಯಾಣ ಆರಂಭಿಸಿರುವುದಾಗಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಹೇಳಿದೆ.
ವೇಳಾಪಟ್ಟಿಯ ಪ್ರಕಾರ, ಜುಲೈ 15ರ ಮಂಗಳವಾರ ಮಧ್ಯಾಹ್ನ 3 ಗಂಟೆ(ಭಾರತೀಯ ಕಾಲಮಾನ) ಸುಮಾರಿಗೆ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಬಾಹ್ಯಾಕಾಶ ನೌಕೆ ಭೂಸ್ಪರ್ಷ ಮಾಡಲಿದೆ ಎಂದು ಹೇಳಿಕೆ ತಿಳಿಸಿದೆ.
Next Story





