ಬಲಪಂಥೀಯ ಇಸ್ರೇಲ್ ರಾಜಕಾರಣಿಯ ವೀಸಾ ರದ್ದುಗೊಳಿಸಿದ ಆಸ್ಟ್ರೇಲಿಯಾ

ಝಿಯೋನಿಸ್ಟ್ ಪಾರ್ಟಿಯ ಮುಖಂಡ ಸಿಮ್ಚಾ ರಾಥ್ ಮನ್ | PC : X.com /@AJEnglish
ಸಿಡ್ನಿ, ಆ.18: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಮ್ಮಿಶ್ರ ಸರಕಾರದ ಭಾಗವಾಗಿರುವ ಝಿಯೋನಿಸ್ಟ್ ಪಾರ್ಟಿಯ ಮುಖಂಡ ಸಿಮ್ಚಾ ರಾಥ್ ಮನ್ ಅವರ ವೀಸಾವನ್ನು ಆಸ್ಟ್ರೇಲಿಯಾ ಸರಕಾರ ರದ್ದುಗೊಳಿಸಿರುವುದಾಗಿ ವರದಿಯಾಗಿದೆ.
ಆಸ್ಟ್ರೇಲಿಯಾದ ಯೆಹೂದಿ ಸಂಘವು ಸೋಮವಾರ ಸಿಮ್ಚಾ ರಾಥ್ ಮನ್ ಅವರ ಉಪನ್ಯಾಸವನ್ನು ಆಯೋಜಿಸಿತ್ತು. `ವಿಭಜನೆಯನ್ನು ಹರಡುವ ಜನರು ದೇಶಕ್ಕೆ ಬರುವುದನ್ನು ಆಸ್ಟ್ರೇಲಿಯಾ ಒಪ್ಪುವುದಿಲ್ಲ. ನೀವು ದ್ವೇಷ ಮತ್ತು ವಿಭಜನೆ ಹರಡಲು ಆಸ್ಟ್ರೇಲಿಯಾಕ್ಕೆ ಬರುವುದಾದರೆ ನೀವು ಇಲ್ಲಿಗೆ ಬರುವುದನ್ನು ನಾವು ಬಯಸುವುದಿಲ್ಲ. ಆಸ್ಟ್ರೇಲಿಯಾವು ಪ್ರತಿಯೊಬ್ಬನೂ ಸುರಕ್ಷಿತವಾಗಿರುವ ಮತ್ತು ಸುರಕ್ಷಿತತೆಯ ಭಾವನೆಯಿರುವ ದೇಶವಾಗಲಿದೆ ' ಎಂದು ಗೃಹ ವ್ಯವಹಾರ ಸಚಿವ ಟಾನಿ ಬುರ್ಕ್ ಹೇಳಿದ್ದಾರೆ. ವೀಸಾ ರದ್ದುಗೊಂಡಿರುವುದರಿಂದ ರಾಥ್ಮನ್ ಮೂರು ವರ್ಷ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವಂತಿಲ್ಲ.
Next Story





