ಖತರ್ ಸೇನಾ ಹೆಲಿಕಾಪ್ಟರ್ ಪತನ : ಕನಿಷ್ಠ 6 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ (File Photo: Qatar Defence Ministry)
ದೋಹಾ: ಖತರ್ ಸೇನಾ ಹೆಲಿಕಾಪ್ಟರ್ ಪತನವಾಗಿ ಕನಿಷ್ಠ 6 ಮಂದಿ ಮೃತಪಟ್ಟಿರುವ ಬಗ್ಗೆ aljazeera.com ವರದಿ ಮಾಡಿದೆ.
ತಾಂತ್ರಿಕ ದೋಷದ ಕಾರಣದಿಂದ ಖತರ್ ಸಮುದ್ರ ಪ್ರದೇಶದಲ್ಲಿ ಈ ಹೆಲಿಕಾಪ್ಟರ್ ಪತನಗೊಂಡಿದೆ.
ಈ ಹೆಲಿಕಾಪ್ಟರ್ನಲ್ಲಿ ಒಟ್ಟು 7 ಮಂದಿ ಇದ್ದರು. ನಾಪತ್ತೆಯಾಗಿರುವ ಒಬ್ಬ ವ್ಯಕ್ತಿಯ ಪತ್ತೆಗಾಗಿ ವಿಶೇಷ ಕಾರ್ಯಾಚರಣೆಗಳು ಮುಂದುವರಿದಿದೆ ಎಂದು ಖತರ್ನ ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.
ಮಧ್ಯಪ್ರಾಚ್ಯ ಸಂಘರ್ಷದ ಮಧ್ಯೆ ಈ ಘಟನೆ ನಡೆದಿದೆ. ಹೆಲಿಕಾಪ್ಟರ್ ಪತನಕ್ಕೆ ಕಾರಣ ಮತ್ತು ಅದರಲ್ಲಿದ್ದವರ ಬಗ್ಗೆ ಸಚಿವಾಲಯ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
Next Story




