ಸ್ಲೋವಾಕಿಯಾದ ಪ್ರಧಾನಿಯ ಮೇಲೆ ಗುಂಡಿನ ದಾಳಿ
![ಸ್ಲೋವಾಕಿಯಾದ ಪ್ರಧಾನಿಯ ಮೇಲೆ ಗುಂಡಿನ ದಾಳಿ ಸ್ಲೋವಾಕಿಯಾದ ಪ್ರಧಾನಿಯ ಮೇಲೆ ಗುಂಡಿನ ದಾಳಿ](https://www.varthabharati.in/h-upload/2024/05/15/1266745-01.webp)
PC : NDTV
ಬ್ರಾಟಿಸ್ಲಾವಾ (ಸ್ಲೋವಾಕಿಯಾ) : ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೋ ಬುಧವಾರ ಮಧ್ಯಾಹ್ನ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ಲೋವಾಕಿಯನ್ ರಾಜಧಾನಿಯ ಈಶಾನ್ಯಕ್ಕೆ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದ ಕಲ್ಚರಲ್ ಹಸ್ ಹೊರಗಡೆ ತಮ್ಮ ಬೆಂಬಲಿಗರನ್ನು ಭೇಟಿಯಾಗುವ ವೇಳೆ ಈ ಘಟನೆ ವರದಿಯಾಗಿದೆ. ಅಪರಿಚನೊಬ್ಬರ ಹಾರಿಸಿದ ನಾಲ್ಕು ಗುಂಡುಗಳು ರಾಬರ್ಟ್ ಫಿಕೊ ಅವರ ಹೊಟ್ಟೆಗೆ ತಗುಲಿದೆ ಎನ್ನಲಾಗಿದೆ. ಘಟನೆಯ ಸಂಬಂಧ ಒಬ್ಬ ಶಂಕಿತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story