ಪಶ್ಚಿಮದಂಡೆಯ ಅಕ್ರಮ ಸ್ವಾಧೀನಕ್ಕೆ ಅವಕಾಶ ನೀಡಬಾರದು: ಸ್ಲೊವೇನಿಯಾ

ಸಾಂದರ್ಭಿಕ ಚಿತ್ರ | PC : PTI
ಲುಬ್ಲಿಯಾನಾ: ಗಾಝಾದಲ್ಲಿ ಶಾಶ್ವತ ಕದನ ವಿರಾಮ ಜಾರಿಗೊಳ್ಳುವುದು ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ ಎಂದು ಸ್ಲೊವೇನಿಯಾದ ವಿದೇಶಾಂಗ ಇಲಾಖೆ ಪ್ರತಿಪಾದಿಸಿದೆ.
ಫೆಲೆಸ್ತೀನ್ಗೆ ರಾಷ್ಟ್ರದ ಸ್ಥಾನಮಾನವನ್ನು ಮಾನ್ಯ ಮಾಡಿರುವ ಸ್ಲೊವೇನಿಯಾ, ಎರಡು ರಾಷ್ಟ್ರ ಪರಿಹಾರ ಸೂತ್ರವನ್ನು ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸುತ್ತಿದೆ. ಪಶ್ಚಿಮ ದಂಡೆಯ ಅಕ್ರಮ ಸ್ವಾಧೀನಕ್ಕೆ ಯಾವತ್ತೂ ಅವಕಾಶ ನೀಡಬಾರದು ಎಂದು ಸ್ಲೊವೇನಿಯಾದ ವಿದೇಶಾಂಗ ಸಚಿವೆ ತಂಜಾ ಫಜೋನ್ ಹೇಳಿದ್ದಾರೆ.
ಕದನ ವಿರಾಮ ಜಾರಿಗೊಂಡ ಬಳಿಕದ ಬೆಳವಣಿಗೆಯನ್ನು ನಿರೀಕ್ಷೆ ಮತ್ತು ನಿರಾಳತೆಯಿಂದ ಗಮನಿಸುತ್ತಿದ್ದೇವೆ. ಸಂಬಂಧಿತ ಪಕ್ಷಗಳು ಕದನ ವಿರಾಮದ ಅಂಶಗಳಿಗೆ ಎಲ್ಲಾ ಹಂತಗಳಲ್ಲೂ ಬದ್ಧರಾಗಿದ್ದರೆ ಹಗೆತನದ ಶಾಶ್ವತ ನಿಲುಗಡೆ ಮತ್ತು ಈ ಪ್ರದೇಶದಲ್ಲಿ ಬಹುನಿರೀಕ್ಷಿತ ಶಾಂತಿಯ ಉದಯಕ್ಕೆ ಕಾರಣವಾಗುತ್ತದೆ ಎಂದವರು ಹೇಳಿದ್ದಾರೆ.
Next Story





