ಭೂಮಿಗೆ ಅಪ್ಪಳಿಸಿದ ಸೌರ ಚಂಡಮಾರುತ; ಬಾನಂಗಳದಲ್ಲಿ ಆಕರ್ಷಕ ಬಣ್ಣಗಳ ಚಿತ್ತಾರ!
PC : X/@farmus86
ವಾಷಿಂಗ್ಟನ್1: ಶನಿವಾರ ಭೂಮಿಗೆ ಅಪ್ಪಳಿಸಿರುವ ಪ್ರಬಲ ಸೌರ ಚಂಡಮಾರುತವು ಉತ್ತರ ಅಮೆರಿಕದಿಂದ ಆಸ್ಟ್ರೇಲಿಯಾದವರೆಗೆ ಬಾನಂಗಳದಲ್ಲಿ ಆಕರ್ಷಕ ಬಣ್ಣಗಳ ಚಿತ್ತಾರವನ್ನು ಮೂಡಿಸಿದೆ.
ಅಪರೂಪದ ಸೌರ ಚಂಡಮಾರುತವು ವಿದ್ಯುತ್ ಗ್ರಿಡ್ಗಳು, ಸಂವಹನ ಜಾಲಗಳು ಮತ್ತು ಉಪಗ್ರಹ ಕಾರ್ಯಗಳಿಗೆ ಅಡ್ಡಿಪಡಿಸುವ ಸಾಮಥ್ರ್ಯದಿಂದಾಗಿ ಜಾಗತಿಕ ಕಳವಳ, ಸಂಚಲನಕ್ಕೂ ಕಾರಣವಾಗಿದೆ. ಇದು ಆಸ್ಟ್ರೇಲಿಯಾದ ಟಾಸ್ಮಾನಿಯಾದಿಂದ ಬ್ರಿಟನ್ವರೆಗೆ ಮತ್ತು ಕೆನಡಾದಿಂದ ಅಮೆರಿಕದವರೆಗೆ ಬೆರಗುಗೊಳಿಸುವ ಅರೋರಾ(ಧ್ರುವ ಪ್ರದೇಶಗಳಲ್ಲಿ ರಾತ್ರಿಯ ವೇಳೆ ಬಾನಿನಲ್ಲಿ ಕಂಡುಬರುವ ವರ್ಣರಂಜಿತ ಬೆಳಕಿನಾಟ)ದ ರೂಪದಲ್ಲಿಯೂ ಗೋಚರಿಸಿದೆ. ಅಮೆರಿಕದ ಓಹಿಯೊ ಮತ್ತು ಕೆನಡಾದ ಒಂಟಾರಿಯೋದಲ್ಲಿಯೂ ಬೆಳಕಿನ ಚಿತ್ತಾರ ಮೂಡಿತ್ತು. ಈ ಸೌರಘಟನೆಯನ್ನು `ತೀವ್ರ ಭೂಕಾಂತೀಯ ಚಂಡಮಾರುತ' ಎಂದು ವರ್ಗೀಕರಿಸಲಾಗಿದೆ.
Northern lights glow in the sky as huge solar storm hits EarthAuroras illuminate the night sky around the world#solarstorm #aurora #NorthernLights pic.twitter.com/xbKr1vmQWc
— Sumit (@SumitHansd) May 11, 2024