ಸೊಮಾಲಿಯಾ: ಹೋಟೆಲ್ ಮೇಲೆ ಉಗ್ರರ ದಾಳಿ; 10 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ / Photo:NDTV
ಮೊಗದಿಶು: ಮಧ್ಯ ಸೊಮಾಲಿಯಾದ ಬೆಲೆಡ್ವೆಯೆನ್ನಲ್ಲಿ ಸ್ಥಳೀಯ ಪ್ರಮುಖರು ಸಭೆ ನಡೆಸುತ್ತಿದ್ದ ಹೋಟೆಲ್ ಮೇಲೆ ಮಂಗಳವಾರ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ನಾಗರಿಕರು ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.
ಅಲ್-ಖೈದಾ ಗುಂಪಿನ ಜತೆ ಸಂಪರ್ಕ ಹೊಂದಿರುವ ಗುಂಪು ಹೋಟೆಲ್ ಮೇಲೆ ಬಾಂಬ್ ತುಂಬಿದ್ದ ಕಾರನ್ನು ಅಪ್ಪಳಿಸಿದ ಬಳಿಕ ಬಂದೂಕುಧಾರಿಗಳು ಹೋಟೆಲ್ ನ ಒಳಗೆ ಪ್ರವೇಶಿಸಿ ಅಲ್ಲಿದ್ದವರನ್ನು ಒತ್ತೆಸೆರೆಯಲ್ಲಿ ಇರಿಸಿಕೊಂಡಿದ್ದರು. ಕಾರು ಬಾಂಬ್ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದರೆ, ಹೋಟೆಲ್ಗೆ ನುಗ್ಗಿದ್ದ ಉಗ್ರರಲ್ಲಿ ಇಬ್ಬರನ್ನು ಗುಂಡಿಕ್ಕಿ ಸಾಯಿಸಲಾಗಿದೆ. ಘಟನೆಯಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ. ಅಲ್-ಶಬಾಬ್ ಗುಂಪು ದಾಳಿಯ ಹೊಣೆ ವಹಿಸಿಕೊಂಡಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
Next Story