ಬುರ್ಕಿನಾ ಫಾಸೊ ಗ್ರಾಮಗಳ ಮೇಲೆ ಉಗ್ರರ ದಾಳಿ ; 170 ಮಂದಿಯ ಹತ್ಯೆ

ಸಾಂದರ್ಭಿಕ ಚಿತ್ರ | Photo:NDTV
ಔಗಡೌಗೌ : ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ದೇಶದ ಮೂರು ಹಳ್ಳಿಗಳ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 170 ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಬುರ್ಕಿನಾ ಫಾಸೊ ದೇಶದ ಯತೆಂಗಾ ಪ್ರಾಂತದ ಕೊಮ್ಸಿಲ್ಗ, ನಾಡಿನ್ ಮತ್ತು ಸೊರೋಯ್ ಗ್ರಾಮಗಳ ಮೇಲೆ ಫೆಬ್ರವರಿ 25ರಂದು ಉಗ್ರರು ದಾಳಿ ನಡೆಸಿ 170 ಮಂದಿಯನ್ನು `ಗಲ್ಲಿಗೇರಿಸಿ' ಹತ್ಯೆ ಮಾಡಿರುವ ಬಗ್ಗೆ ತಡವಾಗಿ ಮಾಹಿತಿ ಲಭಿಸಿದೆ. ಉಗ್ರರ ದಾಳಿಯಲ್ಲಿ ಇತರ ಹಲವರು ಗಾಯಗೊಂಡಿದ್ದು ಹಲವು ಮನೆ ಮತ್ತು ಆಸ್ತಿಗಳಿಗೆ ಹಾನಿಯಾಗಿದೆ. ಉಗ್ರರ ದಾಳಿಯ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮೃತರಲ್ಲಿ ಮತ್ತು ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದು ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಉತ್ತರ ಬುರ್ಕಿನಾ ಫಾಸೊದಲ್ಲಿ ಕಳೆದ ವಾರ ಚರ್ಚ್ ಗಳು ಹಾಗೂ ಮಸೀದಿಗಳ ಮೇಲೆ ನಡೆದಿದ್ದ ಮಾರಣಾಂತಿಕ ದಾಳಿಯಲ್ಲಿ ವ್ಯಾಪಕ ಸಾವು ನೋವು ಸಂಭವಿಸಿತ್ತು.
Next Story





