ದಕ್ಷಿಣ ಆಫ್ರಿಕಾ: ಭೀಕರ ಅಪಘಾತದಲ್ಲಿ 15 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ | PC : PTI
ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಗ್ರಾಮೀಣ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಮಿನಿಬಸ್ಸು ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿದ್ದು 15 ಮಂದಿ ಸಾವನ್ನಪ್ಪಿದ್ದಾರೆ. ಇತರ 5 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಮಖೋಮಾ ಪ್ರಾಂತದ ಪೂರ್ವ ಕೇಪ್ಟೌನ್ ಬಳಿ ಶನಿವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಕ್ಯೋನ್ಸ್ ನಗರದಿಂದ ಕೇಪ್ಟೌನ್ನತ್ತ ಪ್ರಯಾಣಿಸುತ್ತಿದ್ದ ಮಿನಿಬಸ್ಸಿಗೆ ಎದುರಿಂದ ಬರುತ್ತಿದ್ದ ಟ್ರಕ್ ಡಿಕ್ಕಿಯಾಗಿದ್ದು ಮಿನಿಬಸ್ಸಿನಲ್ಲಿದ್ದ 13 ಪ್ರಯಾಣಿಕರು, ಬಸ್ಸಿನ ಚಾಲಕ ಹಾಗೂ ಟ್ರಕ್ನ ಚಾಲಕ ಮೃತಪಟ್ಟಿದ್ದು ಇತರ 5 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ರಾಂತೀಯ ಸಾರಿಗೆ ಇಲಾಖೆಯ ವಕ್ತಾರ ಉನಾಥಿ ಬಿಂಕೋಸ್ರನ್ನು ಉಲ್ಲೇಖಿಸಿ `ನ್ಯೂಸ್ರೂಂ ಆಫ್ರಿಕಾ' ಟಿವಿ ವಾಹಿನಿ ವರದಿ ಮಾಡಿದೆ.
Next Story





