ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ: ಕನಿಷ್ಠ 4 ಮೃತ್ಯು; 1,300 ಮಂದಿ ಸ್ಥಳಾಂತರ

PC : X
ಸಿಯೋಲ್, ಜು.18: ದಕ್ಷಿಣ ಕೊರಿಯಾದಲ್ಲಿ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು 1,300ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಚುಂಗ್ಚೆವಾಂಗ್ ಪ್ರಾಂತದ ಕೆಲವು ಭಾಗಗಳಲ್ಲಿ ಬುಧವಾರದಿಂದ ಗುರುವಾರದವರೆಗೆ 16.5 ಇಂಚು ಮಳೆಯಾಗಿದೆ. ಒಸಾನ್ ನಗರದಲ್ಲಿ ರಸ್ತೆ ಮೇಲ್ಸೇತುವೆಯ ಗೋಡೆ ಕುಸಿದು ಕೆಳಗಿನ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಮೇಲೆ ಬಿದ್ದಾಗ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ದಕ್ಷಿಣ ಪ್ರಾಂತದಲ್ಲಿ ಹಲವೆಡೆ ಪ್ರವಾಹದಿಂದಾಗಿ ಇತರ ಮೂವರು ಸಾವನ್ನಪ್ಪಿದ್ದಾರೆ. ಜಲಾವೃತಗೊಂಡ ಪ್ರದೇಶದಿಂದ 1,382 ಮಂದಿಯನ್ನು ಸ್ಥಳಾಂತರಿಸಲಾಗಿದ್ದು 46 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.
Next Story





