ದಕ್ಷಿಣ ಕೊರಿಯಾ | ಮಾಜಿ ಪ್ರಧಾನಿಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದು

ಹಾನ್ ಡಕ್-ಸೂ | Photo Credit : AP
ಸಿಯೋಲ್: ನಾಗರಿಕ ಆಡಳಿತವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ಸೇನಾ ಕಾನೂನು ಘೋಷಣೆಗೆ ಸಹಾಯ ಮಾಡಿದ ಆರೋಪದ ಮೇಲೆ ಮಾಜಿ ಪ್ರಧಾನಿ ಹಾನ್ ಡಕ್-ಸೂ ಅವರಿಗೆ ವಿಧಿಸಲಾಗಿದ್ದ 15 ವರ್ಷಗಳ ಜೈಲು ಶಿಕ್ಷೆಯನ್ನು ದಕ್ಷಿಣ ಕೊರಿಯಾದ ಸುಪ್ರೀಂಕೋರ್ಟ್ ಗುರುವಾರ ರದ್ದುಗೊಳಿಸಿದ್ದು, ಪ್ರಕರಣವನ್ನು ಕೆಳ ನ್ಯಾಯಾಲಯಕ್ಕೆ ಮರಳಿ ಕಳುಹಿಸಿದೆ.
2024ರಲ್ಲಿ, ಅಂದಿನ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಹೊರಡಿಸಿದ್ದ ಈ ಸುಗ್ರೀವಾಜ್ಞೆಯು ದೇಶವನ್ನು ಗೊಂದಲಕ್ಕೆ ದೂಡಿತ್ತು, ಅಲ್ಪಾವಧಿಯ ಈ ಸೇನಾ ಕಾನೂನು ಪ್ರಯತ್ನ ಸಾಂವಿಧಾನಿಕ ವ್ಯವಸ್ಥೆಗೆ ಧಕ್ಕೆ ತಂದಿದೆ ಮತ್ತು ದೇಶದ್ರೋಹದ ಕೃತ್ಯಕ್ಕೆ ಸಮನಾಗಿದೆ ಎಂದು ನ್ಯಾಯಾಲಯ ಹೇಳಿತ್ತು ಮತ್ತು ಹಾನ್ ಅವರಿಗೆ ಜನವರಿಯಲ್ಲಿ ಜೈಲು ಶಿಕ್ಷೆ ವಿಧಿಸಿತ್ತು .
ಈ ತೀರ್ಪಿನ ವಿರುದ್ಧ ಹಾನ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹಾನ್ ಮೇಲಿನ ದೇಶದ್ರೋಹದ ಆರೋಪವನ್ನು ಎತ್ತಿಹಿಡಿಯಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟು ಮರುವಿಚಾರಣೆಗೆ ಆದೇಶಿಸಿದೆ.




