ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷರ ಪತ್ನಿಗೆ ಜೈಲುಶಿಕ್ಷೆ

ಕಿಮ್ ಕಿಯೊನ್ ಹೀ | Photo Credit : AP
ಸಿಯೋಲ್, ಜ.28: ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರ ಪತ್ನಿ, ಮಾಜಿ ಪ್ರಥಮ ಮಹಿಳೆ ಕಿಮ್ ಕಿಯೊನ್ ಹೀ ಅವರಿಗೆ ಸ್ಥಳೀಯ ನ್ಯಾಯಾಲಯ ಬುಧವಾರ 1 ವರ್ಷ 8 ತಿಂಗಳ ಜೈಲುಶಿಕ್ಷೆ ವಿಧಿಸಿದೆ.
8,990 ಡಾಲರ್ ದಂಡ ಪಾವತಿಸುವ ಜೊತೆಗೆ, ಲಂಚದ ರೂಪದಲ್ಲಿ ಸ್ವೀಕರಿಸಿದ್ದ ವಜ್ರದ ನೆಕ್ಲೇಸ್ ಅನ್ನು ಸರಕಾರಿ ಖಜಾನೆಗೆ ಒಪ್ಪಿಸುವಂತೆ ನ್ಯಾಯಾಲಯ ಸೂಚಿಸಿದೆ. ಆದರೆ ಷೇರು ಮಾರುಕಟ್ಟೆಯಲ್ಲಿ ಪ್ರಭಾವ ಬೀರಿ ಲಾಭ ಗಳಿಸಿರುವುದು ಹಾಗೂ ರಾಜಕೀಯ ನಿಧಿ ಕಾಯ್ದೆ ಉಲ್ಲಂಘನೆಯ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ವರದಿಯಾಗಿದೆ.
Next Story





