ದಕ್ಷಿಣ ಕೊರಿಯಾ ಹಡಗಿನ ಮೇಲೆ ದಾಳಿ ನಡೆಸಿಲ್ಲ: ಇರಾನ್

ಸಾಂದರ್ಭಿಕ ಚಿತ್ರ | Photo Credit : PTI
ವಾಶಿಂಗ್ಟನ್, ಮೇ 7: ಈ ವಾರ ಹಾರ್ಮುಝ್ ಜಲಸಂಧಿಯಲ್ಲಿ ದಕ್ಷಿಣ ಕೊರಿಯಾದ ಸರಕು ಸಾಗಣೆ ಹಡಗಿನ ಮೇಲೆ ತಾನು ದಾಳಿ ನಡೆಸಿದ್ದೇನೆಂಬ ಆರೋಪವನ್ನು ಇರಾನ್ ಗುರುವಾರ ನಿರಾಕರಿಸಿದೆ.
ಪನಾಮ ಧ್ವಜವಿದ್ದ ದಕ್ಷಿಣ ಕೊರಿಯಾದ ಎಚ್ಎಂಎಂ ನಾಮು ಕಾರ್ಗೊ ನೌಕೆಯಲ್ಲಿ ಸಂಭವಿಸಿದ ಸ್ಫೋಟದ ಹಿಂದೆ ಇರಾನ್ ಸಶಸ್ತ್ರ ಪಡೆಗಳ ಕೈವಾಡವಿದೆ ಎಂಬ ಆರೋಪಗಳನ್ನು ಸಿಯೋಲ್ ನಲ್ಲಿರುವ ಇರಾನ್ ರಾಯಭಾರಿ ಕಚೇರಿ ತಳ್ಳಿಹಾಕಿದೆ.
24 ಮಂದಿ ನಾವಿಕರಿದ್ದ ಎಚ್ಎಂಎಂ ನಾಮು ಹಡಗು ಸೋಮವಾರ ಆಯಕಟ್ಟಿನ ಹಾರ್ಮುಝ್ ಜಲಸಂಧಿಯನ್ನು ಹಾದುಹೋಗುತ್ತಿದ್ದಾಗ ಅದಕ್ಕೆ ಬೆಂಕಿ ಹೊತ್ತಿಕೊಂಡಿತ್ತು.
ಈ ಘಟನೆ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಸೇನೆಯೇ ದಕ್ಷಿಣ ಕೊರಿಯಾದ ಸರಕು ನೌಕೆಯ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿದ್ದರು. ಜಲಸಂಧಿಯಲ್ಲಿ ನೌಕೆಗಳ ಸುರಕ್ಷಿತ ಸಂಚಾರಕ್ಕಾಗಿ ಅಮೆರಿಕ ನೇತೃತ್ವದ ಕಾರ್ಯಾಚರಣೆಗೆ ದಕ್ಷಿಣ ಕೊರಿಯಾ ಕೈಜೋಡಿಸಬೇಕೆಂದು ಅವರು ಆಗ್ರಹಿಸಿದ್ದರು.
Next Story




