ಟ್ರಂಪ್ ಅವರ ಶಾಂತಿ ಮಂಡಳಿ ಆಹ್ವಾನ ತಿರಸ್ಕರಿಸಿದ ಸ್ಪೇನ್: ವರದಿ

Photo Credit : AP \ PTI
ಮ್ಯಾಡ್ರಿಡ್, ಜ.23: ಗಾಝಾ ಶಾಂತಿ ಮಂಡಳಿಗೆ ಸೇರ್ಪಡೆಗೊಳ್ಳುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸುವುದಾಗಿ ಸ್ಪೇನ್ ಶುಕ್ರವಾರ ಹೇಳಿದೆ.
ಟ್ರಂಪ್ ಅವರ ಕ್ರಮವು ಸ್ಪೇನ್ ದೀರ್ಘಾವಧಿಯಿಂದ ಬದ್ಧವಾಗಿರುವ ಬಹುಪಕ್ಷೀಯತೆ ಹಾಗೂ ವಿಶ್ವಸಂಸ್ಥೆ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಸ್ಪೇನ್ನ ಪ್ರಧಾನಮಂತ್ರಿ ಪೆಡ್ರೋ ಸ್ಯಾಂಚೆಸ್ ಹೇಳಿದ್ದಾರೆ. ಇದರೊಂದಿಗೆ ಸ್ಪೇನ್, ಫ್ರಾನ್ಸ್, ಜರ್ಮನಿ, ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಸ್ಲೊವೇನಿಯಾ, ಇಟಲಿ ಮತ್ತು ಬ್ರಿಟನ್ ಅಧಿಕೃತವಾಗಿ ಗಾಝಾ ಶಾಂತಿ ಮಂಡಳಿಯಿಂದ ಹೊರಗೇ ಉಳಿದಂತಾಗಿದೆ.
Next Story





