2026ರ ಆಸ್ಕರ್ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಫೆಲಸ್ತೀನ್ ಬೆಂಬಲಿಸಿದ ಸ್ಪ್ಯಾನಿಷ್ ನಟ ಜೇವಿಯರ್

ಜೇವಿಯರ್ ಬಾರ್ಡೆಮ್ PC; screngrab/x.com/IanSpeedHQ
ಲಾಸ್ ಏಂಜಲಿಸ್: 2026ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಫೆಲಸ್ತೀನ್ ಬೆಂಬಲಿಸಿ ಗಮನ ಸೆಳೆದರು.
ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಚಿತ್ರ ಪ್ರಶಸ್ತಿಯನ್ನು ಪ್ರದಾನಿಸುವ ವೇಳೆ ಮಾತನಾಡಿದ ಅವರು, “ಯುದ್ಧ ಬೇಡ; ಫೆಲಸ್ತೀನ್ ಸ್ವತಂತ್ರವಾಗಲಿ” ಎಂದು ಹೇಳಿದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ತಕ್ಷಣ ಅಂತ್ಯಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಶಾಂತಿ ಸ್ಥಾಪನೆ ಅಗತ್ಯವಿದೆ. ಹಿಂಸಾಚಾರಕ್ಕಿಂತ ಸಂವಾದದ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂದು ಅಭಿಪ್ರಾಯಪಟ್ಟರು.
ಇಸ್ರೇಲ್ ನ ಕ್ರಮಗಳ ಬಗ್ಗೆ ಟೀಕಿಸಿದ ಬಾರ್ಡೆಮ್, ಮಾನವೀಯ ದೃಷ್ಟಿಕೋನದಿಂದ ಸಮಸ್ಯೆಯನ್ನು ನೋಡುವ ಅಗತ್ಯವಿದೆ ಎಂದು ಹೇಳಿದರು.
Next Story




