Sri Lanka | 4 ಲೀಟರ್ ಪೆಟ್ರೋಲ್ ದಾಸ್ತಾನಿರಿಸಿಕೊಂಡ ವ್ಯಕ್ತಿಗೆ ಜೈಲುಶಿಕ್ಷೆ!

ಸಾಂದರ್ಭಿಕ ಚಿತ್ರ | Photo Credit : freepik
ಕೊಲಂಬೊ, ಮಾ.28: ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದಾದ್ಯಂತ ಇಂಧನ ಕೊರತೆಯ ಸಂದರ್ಭದಲ್ಲಿ 4 ಲೀಟರ್ ಪೆಟ್ರೋಲ್ ದಾಸ್ತಾನಿರಿಸಿಕೊಂಡಿರುವುದನ್ನು ಒಪ್ಪಿಕೊಂಡ ವ್ಯಕ್ತಿಗೆ ಶ್ರೀಲಂಕಾದ ನ್ಯಾಯಾಲಯ ಮೂರು ವಾರಗಳ ಜೈಲುಶಿಕ್ಷೆ ವಿಧಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಆರೋಪಿಯು ಮೊದಲು ಹುಲ್ಲು ಕತ್ತರಿಸುವ ಯಂತ್ರಕ್ಕೆ ಪೆಟ್ರೋಲ್ ಸಂಗ್ರಹಿಸಿಟ್ಟಿರುವುದಾಗಿ ವಾದಿಸಿದ್ದ. ಆದರೆ ಈತ ಪೆಟ್ರೋಲನ್ನು ‘ಬ್ಲ್ಯಾಕ್ ಮಾರ್ಕೆಟ್’ನಲ್ಲಿ ಮಾರಲು ಉದ್ದೇಶಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಆರೋಪಿಗೆ 3 ವಾರಗಳ ಜೈಲುಶಿಕ್ಷೆಯ ಜೊತೆಗೆ 1,500 ರೂ. (ಶ್ರೀಲಂಕಾದ ಕರೆನ್ಸಿ) ದಂಡ ವಿಧಿಸಲಾಗಿದೆ. ಮಧ್ಯಪ್ರಾಚ್ಯ ಯುದ್ಧ ಆರಂಭಗೊಂಡ ಬಳಿಕ ಶ್ರೀಲಂಕಾದಲ್ಲಿ ಇಂಧನ ಪಡಿತರ ವ್ಯವಸ್ಥೆ ಜಾರಿಯಲ್ಲಿದೆ.
Next Story




