Sri Lanka| ನರ್ಸಿಂಗ್ ಹೋಂನಲ್ಲಿ ಅಗ್ನಿ ಅವಘಡ : 12 ಮಂದಿ ಮೃತ್ಯು

Photo Credit: timesofindia
ಕೊಲಂಬೋ, ಜೂ.4: ಪಶ್ಚಿಮ ಶ್ರೀಲಂಕಾದ ಬಟಗೋಡ ಎಂಬಲ್ಲಿ ಬುಧವಾರ ತಡರಾತ್ರಿ ನರ್ಸಿಂಗ್ ಹೋಂನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 12 ಮಂದಿ ಮೃತಪಟ್ಟಿದ್ದು, ಇತರ 7 ಮಂದಿ ಗಾಯಗೊಂಡಿದ್ದಾರೆ. ನರ್ಸಿಂಗ್ ಹೋಂನಿಂದ 51 ಮಂದಿಯನ್ನು ರಕ್ಷಿಸಲಾಗಿದ್ದು ಮ್ಯಾನೇಜರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಅಂಗೂರುವಟೋಟ ನಗರದಲ್ಲಿರುವ `ಮೌಪಿಯ ಸೇವಾನ ಎಲ್ಡರ್ಸ್ ಹೋಮ್'ನಲ್ಲಿ ಬೆಂಕಿ ದುರಂತ ಸಂಭವಿಸಿದೆ. ನರ್ಸಿಂಗ್ ಹೋಂ ಇರುವ ಕಟ್ಟಡದಲ್ಲೇ ಮಾನಸಿಕ ಅಸ್ವಸ್ಥ ಯುವಜನರ ಆರೈಕೆ ಕೇಂದ್ರವೂ ಇದ್ದು ಎರಡೂ ವ್ಯವಸ್ಥೆಗಳಲ್ಲಿ ಒಟ್ಟು 71 ಮಂದಿಯಿದ್ದರು. ಹಾಸಿಗೆಗಳನ್ನು ಪೇರಿಸಿಟ್ಟಿದ್ದ ನರ್ಸಿಂಗ್ ಹೋಂನ ಸ್ಟೋರ್ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story




