ಶ್ರೀಲಂಕಾ | ಇಸ್ರೇಲ್ ಪ್ರಜೆಗಳಿಗೆ ವೀಸಾ-ಮುಕ್ತ ನೀತಿ ರದ್ದತಿಗೆ ಆಗ್ರಹಿಸಿದ ಮಾನವ ಹಕ್ಕುಗಳ ಕಾರ್ಯಕರ್ತರು

AN photo
ಕೊಲಂಬೊ, ಆ.7: ಇಸ್ರೇಲ್ ಪ್ರಜೆಗಳಿಗೆ ವೀಸಾ-ಮುಕ್ತ ಪ್ರವೇಶ ಕಲ್ಪಿಸುವ ಸರಕಾರದ ನೀತಿಯನ್ನು ರದ್ದುಗೊಳಿಸುವಂತೆ ಶ್ರೀಲಂಕಾದ ಮಾನವ ಹಕ್ಕು ಕಾರ್ಯಕರ್ತರು ಅಧ್ಯಕ್ಷ ಅನೂರ ಕುಮಾರ ದಿಸ್ಸನಾಯಕೆ ಅವರನ್ನು ಆಗ್ರಹಿಸಿದ್ದಾರೆ.
ದೇಶದ ಆರ್ಥಿಕತೆಗೆ ಚೇತರಿಕೆ ಒದಗಿಸುವ ನಿಟ್ಟಿನಲ್ಲಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಇಸ್ರೇಲ್ ಸೇರಿದಂತೆ 40 ದೇಶಗಳ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶ ಒದಗಿಸಲು ಶ್ರೀಲಂಕಾ ಸರಕಾರ ನಿರ್ಧರಿಸಿದೆ.
ಈ ನೀತಿಯು ಫೆಲೆಸ್ತೀನ್ ವಿಷಯಕ್ಕೆ ಸಂಬಂಧಿಸಿ ದ್ವೀಪರಾಷ್ಟ್ರದ ದೀರ್ಘಕಾಲದ ನಿಲುವಿಗೆ ವಿರುದ್ಧವಾಗಿದೆ ಎಂದು ಕಾರ್ಯಕರ್ತರು ಹೇಳಿದ್ದು ಇಸ್ರೇಲಿಯನ್ನರನ್ನು ಈ ಪಟ್ಟಿಯಿಂದ ಹೊರಗಿಡುವಂತೆ ಆಗ್ರಹಿಸಿದ್ದಾರೆ. ಸರಕಾರದ ನಿರ್ಧಾರವನ್ನು ವಿರೋಧಿಸಿ ಮಂಗಳವಾರ ರಾಜಧಾನಿ ಕೊಲಂಬೋದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.
Next Story





