ಶ್ರೀಲಂಕಾ ಅಂಡರ್19 ಕ್ರಿಕೆಟ್ ತಂಡದ ಮಾಜಿ ನಾಯಕನ ಗುಂಡಿಕ್ಕಿ ಹತ್ಯೆ
PC : NDTV
ಕಾಂಡ ಮಾವತ (ಶ್ರೀಲಂಕಾ): ಶ್ರೀಲಂಕಾದ ಹತ್ತೊಂಬತ್ತು ವಯಸ್ಸಿನ ಕೆಳಗಿನ ಕ್ರಿಕೆಟ್ ತಂಡದ ಮಾಜಿ ನಾಯಕ ಧಮ್ಮಿಕ ನಿರೋಶನಾ ಅವರನ್ನು ಮಂಗಳವಾರ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ. ಕಾಂಡ ಮಾವತದಲ್ಲಿನ ಅಂಬಲಗೊಂಡ ಗ್ರಾಮದಲ್ಲಿನ ಅವರ ಸ್ವಗೃಹದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ನಿರೋಶನಾ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ತಮ್ಮ ಮನೆಯಲ್ಲಿದ್ದಾಗ, ಅವರ ಮೇಲೆ ರೈಫಲ್ನಿಂದ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಘಟನೆಯ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಘಟನೆಗೆ ಕಾರಣವೇನು ಹಾಗೂ ಶಂಕಿತ ಆರೋಪಿಗಳಾರು ಎಂಬುದು ಈವರೆಗೆ ತಿಳಿದು ಬಂದಿಲ್ಲ.
A former Sri Lankan U19 captain reportedly shot dead in Ambalangoda . Gone too soon brother. Discipline is number 1 in any profession. https://t.co/5QseJBpXJO
— Amila Kalugalage (@akalugalage) July 16, 2024
ಧಮ್ಮಿಕ ನಿರೋಶನಾ ಶ್ರೀಲಂಕಾದ ಯುವ ತಂಡದ ಅತ್ಯುತ್ತಮ ವೇಗದ ಬೌಲಿಂಗ್ ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದರು. ಅವರು ತಮ್ಮ 20ನೇ ವಯಸ್ಸಿನಲ್ಲಿ ಕ್ರೀಡೆಯನ್ನು ತೊರೆದಿದ್ದರು.