ಟ್ರಂಪ್ ಫ್ಯಾಸಿಸ್ಟ್ ಎಂಬ ಹೇಳಿಕೆಗೆ ಈಗಲೂ ಬದ್ಧ: ನ್ಯೂಯಾರ್ಕ್ನ ನೂತನ ಮೇಯರ್ ಮಮ್ದಾನಿ

PC: x.com/metzgov
ನ್ಯೂಯಾರ್ಕ್: ಟ್ರಂಪ್ ಫ್ಯಾಸಿಸ್ಟ್ ಎಂಬ ಬಗ್ಗೆ ತಾವು ಧೀರ್ಘಕಾಲದಿಂದ ಹೊಂದಿದ್ದ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ರವಿವಾರ ಸ್ಪಷ್ಟಪಡಿಸಿದ್ದಾರೆ.
ಶ್ವೇತಭವನದಲ್ಲಿ ಟ್ರಂಪ್ ಜತೆಗಿನ ಮೊದಲ ಸಭೆ ಅತ್ಯಂತ ಸೌಹಾರ್ದಯುತವಾಗಿ ನಡೆದ ಬೆನ್ನಲ್ಲೇ ಮಮ್ದಾನಿ ಈ ಹೇಳಿಕೆ ನೀಡಿದ್ದಾರೆ.
"ಇದನ್ನು ನಾನು ಹಿಂದೆಯೂ ಹೇಳಿದ್ದೆ; ಇಂದೂ ಹೇಳುತ್ತಿದ್ದೇನೆ" ಎಂದು NBC ನ್ಯೂಸ್ ಜತೆ ಮಾತನಾಡಿದ ಮಮ್ದಾನಿ ಸ್ಪಷ್ಟಪಡಿಸಿದರು. ಅಮೆರಿಕದ ಅಧ್ಯಕ್ಷರು ಫ್ಯಾಸಿಸ್ಟ್ ಎಂಬ ತಮ್ಮ ನಿಲುವಿನಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಮಮ್ದಾನಿ ಈ ಮೇಲಿನ ಉತ್ತರ ನೀಡಿದರು.
ಎಡಪಂಥೀಯ, ಡೆಮಾಕ್ರಟಿಕ್ ಸೋಶಲಿಸ್ಟ್ ಮುಖಂಡ ಝೊಹ್ರಾನ್ ಮಮ್ದಾನಿ ಶುಕ್ರವಾರ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು. ಹಲವು ತಿಂಗಳ ಪರಸ್ಪರ ಕೆಸರೆರಚಾಟವನ್ನು ಬದಿಗಿರಿಸಿ, ನಗರದ ಭವಿಷ್ಯದ ದೃಷ್ಟಿಯಿಂದ ಒಗ್ಗೂಡಿ ಕೆಲಸ ಮಾಡುವ ನಿಟ್ಟಿನಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.





