ಹಾರ್ಮುಝ್ ಜಲಸಂಧಿ ಎಲ್ಲರಿಗೂ ಮುಕ್ತವಾಗಿದೆ : ಅಮೆರಿಕ ಹೇಳಿಕೆ

Photo Credit : PTI
ವಾಶಿಂಗ್ಟನ್, ಜು.12: ಹಾರ್ಮುಝ್ ಜಲಮಾರ್ಗವು ಕಾನೂನುಬದ್ಧವಾಗಿ ಸಂಚರಿಸಲು ಬಯಸುವ ಎಲ್ಲಾ ಹಡಗುಗಳಿಗೂ ಮುಕ್ತವಾಗಿದ್ದು ಜಲಸಂಧಿಯ ಮೂಲಕ ಸಂಚಾರವು ಸುಗಮವಾಗಿ ಸಾಗುತ್ತಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರತಿಪಾದಿಸಿದೆ.
`ಇರಾನ್ನ ಅನಗತ್ಯ ಆಕ್ರಮಣಶೀಲತೆ, ಕಿರುಕುಳ, ಬೆದರಿಕೆಗಳು ಮತ್ತು ನಿರಂಕುಶ ಘೋಷಣೆಗಳ ಹೊರತಾಗಿಯೂ, ನೌಕಾಯಾನದ ಸ್ವಾತಂತ್ರ್ಯವು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಪಡೆಗಳು ಸನ್ನದ್ಧವಾಗಿವೆ. ಇರಾನ್ ಈ ಜಲಸಂಧಿಯ ಮೇಲೆ ನಿಯಂತ್ರಣ ಹೊಂದಿಲ್ಲ ಮತ್ತು ಮುಕ್ತ ಸಂಚಾರದ ಮಾರ್ಗಗಳು ತೆರೆದೇ ಇವೆ' ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ.
Next Story




