Saudi Arabia | ಸೌದಿ ಅರಾಮ್ಕೊ ಕಟ್ಟಡದ ಮೇಲೆ ದಾಳಿ

Photo: x.com/anadoluagency
ಧಹ್ರಾನ್: ಸೌದಿ ಅರೇಬಿಯದ ಪ್ರಮುಖ ತೈಲ ಕಂಪೆನಿ ಸೌದಿ ಅರಾಮ್ಕೊದ ಆಡಳಿತಾತ್ಮಕ ಕಟ್ಟಡದ ಮೇಲೆ ಮಂಗಳವಾರ ಸಂಜೆ ದಾಳಿ ನಡೆದಿದ್ದು, ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸೌದಿ ಇಂಧನ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಸೌದಿ ಅರೇಬಿಯ ದ ಪೂರ್ವ ಭಾಗದಲ್ಲಿರುವ ದಹ್ರಾನ್ ನ ಕಟ್ಟಡದ ಮೇಲೆ ನಡೆದ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿದ್ದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಇದಕ್ಕೂ ಕೆಲವು ಗಂಟೆಗಳ ಮೊದಲು, ಅರಾಮ್ಕೊದ ಪ್ರಧಾನ ಕಚೇರಿಯ ಸಮೀಪದಲ್ಲಿ ಜೋರಾದ ಸ್ಫೋಟದ ಶಬ್ದಗಳು ಕೇಳಿಬಂದಿದ್ದವು. ಈ ಬೆಳವಣಿಗೆಯ ಬೆನ್ನಲ್ಲೇ ಆಡಳಿತಾತ್ಮಕ ಕಟ್ಟಡದ ಮೇಲಿನ ದಾಳಿಯ ವರದಿಯಾಗಿದೆ.
ಆದರೆ, ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈವರೆಗೆ ಯಾವುದೇ ಗುಂಪು ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ.
Next Story




